ಫಸ್ಟ್ ನ್ಯೂರೋ ಆಸ್ಪತ್ರೆಗೆ ‘ಡೆಡಿಕೇಟೆಡ್ ಸ್ಟ್ರೋಕ್ ಯೂನಿಟ್ ಆಫ್ ಎಕ್ಸಲೆನ್ಸ್- ಸೌತ್’ ಪ್ರಶಸ್ತಿ

ನವದೆಹಲಿಯ ದಿ ಲಲಿತ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ರಕ್ಷಣಾ ಕಾರ್ಯಕ್ರಮದಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಡಾ. ವಿಕಾಸ್ ವಿಠ್ಠಲ್ ಪ್ರಭು ಅವರು ಸಂಸ್ಥೆಯ ಪರವಾಗಿ ಪ್ರತಿಷ್ಠಿತ ‘ಡೆಡಿಕೇಟೆಡ್ ಸ್ಟ್ರೋಕ್ ಯೂನಿಟ್ ಆಫ್ ಎಕ್ಸಲೆನ್ಸ್ - ಸೌತ್’ ಪ್ರಶಸ್ತಿ ಸ್ವೀಕರಿಸಿದರು.

Published on
ಮಂಗಳೂರು: ಫಸ್ಟ್ ನ್ಯೂರೋ ಆಸ್ಪತ್ರೆಯು ಪಾರ್ಶ್ವವಾಯು ಆರೈಕೆಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ ಸಹಯೋಗದೊಂದಿಗೆ ವಾಯ್ಸ ಆಫ್ ಹೆಲ್ತ್‌ಕೇರ್ ಆಯೋಜಿಸಲಾದ ರಾಷ್ಟ್ರೀಯ ಆರೋಗ್ಯ ರಕ್ಷಣಾ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಡೆಡಿಕೇಟೆಡ್ ಸ್ಟ್ರೋಕ್ ಯೂನಿಟ್ ಆಫ್ ಎಕ್ಸಲೆನ್ಸ್ - ಸೌತ್’ ಪ್ರಶಸ್ತಿ ಪಡೆದುಕೊಂಡಿದೆ.
ನವದೆಹಲಿಯ ದಿ ಲಲಿತ್ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯ ಕನ್ಸಲ್ಟೆಂಟ್ ನ್ಯೂರೋಲಾಜಿಸ್ಟ್ ಡಾ. ವಿಕಾಸ್ ವಿಠ್ಠಲ್ ಪ್ರಭು ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಫಸ್ಟ್ ನ್ಯೂರೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರಾಜೇಶ್ ಶೆಟ್ಟಿ, ಡೆಡಿಕೇಟೆಡ್ ಸ್ಟ್ರೋಕ್ ಯೂನಿಟ್ ಆಫ್ ಎಕ್ಸಲೆನ್ಸ್ - ಸೌತ್ ಅನ್ನು ಸ್ವೀಕರಿಸಲು ನಮಗೆ ತುಂಬಾ ಗೌರವವಾಗಿದೆ. ಈ ಪ್ರತಿಷ್ಠಿತ ಮನ್ನಣೆಯು ನಮ್ಮ ಪಾರ್ಶ್ವವಾಯು ರೋಗಿಗಳಿಗೆ ಅಸಾಧಾರಣ ಆರೈಕೆಯನ್ನು ನೀಡಲು ನಿರಂತರವಾಗಿ ಶ್ರಮಿಸುವ ನಮ್ಮ ಇಡೀ ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿಫಲವಾಗಿದೆ. ಮುಂದಿನ ದಿನಗಳಲ್ಲಿ ನಾವು ಪಾರ್ಶ್ವವಾಯು ರೋಗಿಗಳ ಆರೈಕೆ ಸೇವೆಗಳನ್ನು ಇನ್ನಷ್ಟು ಉತ್ತಮ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸಲು ಸದಾ ಬದ್ಧರಾಗಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net