

ಉತ್ತರಕನ್ನಡ: ಸಂಭ್ರಮ-ಸಡಗರ ತುಂಬಿದ್ದ ಮದುವೆ ಮನೆಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ಕುಟುಂಬಸ್ಥರು-ಬಂಧುಬಳಗ ಸೇರಿದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಅಂಕೋಲಾ ತಾಲೂಕಿನ ಅವರ್ಸಾದ ಶ್ರೀ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ರಾಮನಗುಳಿಯ ದಿವ್ಯಾ ಮತ್ತು ಕೇಣಿ ಗ್ರಾಮದ ಪ್ರಕಾಶ ಅವರ ಮದುವೆ ಕಾರ್ಯಕ್ರಮ ಶನಿವಾರ ನಿಗದಿಯಾಗಿತ್ತು. ಹಾಗಾಗಿ ಅವರ್ಸಾದಲ್ಲಿರುವ ದಿವ್ಯಾರ ಅಕ್ಕನ ಮನೆಯಲ್ಲಿ ಮದುಮಗಳು ಹಾಗೂ ಸಂಬಂಧಿಕರು ಉಳಿದುಕೊಂಡಿದ್ದರು. ಮಧ್ಯಾಹ್ನ 12.40ಕ್ಕೆ ಮುಹೂರ್ತ ಇತ್ತು, ಬೆಳಗಿನ ಜಾವ ಎದ್ದು ಮದುವೆಗೆ ಸಿದ್ಧತೆ ನಡೆಸಿದ್ದರು. ಇದನ್ನೂ ಓದಿರಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು
ಅಂಕೋಲಾ ಠಾಣೆಯ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಗೋಡೆಗಳ ಮೇಲೆ ಗುಂಡಿನ ಕಲೆ ಲಭಿಸಿದೆ. ಮೂರು ಗುಂಡುಗಳು ಪತ್ತೆಯಾಗಿವೆ. ಗುಂಡಿನ ಸದ್ದಿಗೆ ಕಂಗಾಲಾಗಿದ್ದ ವಧುವಿನ ಕುಟುಂಬಕ್ಕೆ ಪೊಲೀಸು ಧೈರ್ಯ ತುಂಬಿದರು. ಪೊಲೀಸ್ ಗಸ್ತಿನಲ್ಲಿ ಮದುವೆ ನೆರವೇರಿತು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಡಿನ ದಾಳಿ ನಡೆಸಿದವರನ್ನ ಪತ್ತೆ ಹಚ್ಚಲು ಕುಟುಂಬಸ್ಥರು ಆಗ್ರಹಿಸಿದ್ದಾರೆ.