ಕೆಲಸದಿಂದ ತೆಗೆದಿದ್ದಕ್ಕೆ ಬಸ್​ನ ಡಿಸ್​ಪ್ಲೇ ಬೋರ್ಡ್​ನಲ್ಲಿ ಮಾಲೀಕನ ವಿರುದ್ಧ ಕೆಟ್ಟದಾಗಿ ಬರೆದ ಕಂಡಕ್ಟರ್!​

Bus display Board
Published on

ಭೋಪಾಲ್​: ಕೆಲಸದಿಂದ ತೆಗೆದು ಹಾಕಿದ ಮಾಲೀಕನ ವಿರುದ್ಧ ಬಸ್​ ಕಂಡಕ್ಟರ್​ ಓರ್ವ ತನ್ನದೇ ಶೈಲಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವುದರ ಜೊತೆ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.

ಸುಖೇಜಾ ಬಸ್​ ಸರ್ವೀಸ್​ ಹೆಸರಿನ ಬಸ್​ ಮಧ್ಯಪ್ರದೇಶದ ಸಾತ್ನಾದಿಂದ ಇಂದೋರ್​ಗೆ ಹೋಗುವಾಗ ಬಸ್​ ಮಾಲೀಕ, ಕಂಡಕ್ಟರ್​ನನ್ನು ಬೈದು, ಆತನನ್ನು ಕೆಲಸದಿಂದ ತೆಗೆದುಹಾಕಿದ್ದರು. ಇದರಿಂದ ಆಕ್ರೋಶಗೊಂಡ ಕಂಡಕ್ಟರ್, ಬಸ್​ನ ಡಿಸ್​​ಪ್ಲೇ ಬೋರ್ಡ್​ನಲ್ಲಿದ್ದ "ಸುಖೇಜಾ ಬಸ್​ ಸರ್ವೀಸ್" ಹೆಸರನ್ನು ಬದಲಾಯಿಸಿ, ಮಾಲೀಕನ ಹೆಸರಿನಿಂದ ಮುಂದೆ ಕೆಟ್ಟ ಪದವನ್ನು ಸೇರಿಸಿ, ಸೇಡು ತೀರಿಸಿಕೊಂಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಕಂಡಕ್ಟರ್​, ತನ್ನ ಕೆಲಸವನ್ನು ಬಿಡುವ ಮುನ್ನ ಬಸ್​ನಲ್ಲಿದ್ದ ಸಿಪಿಯು ಡಿಸ್​ಪ್ಲೇ ಪಾಸ್​ವರ್ಡ್​ ಸಹ ಬದಲಾಯಿಸಿ, ಹೋಗಿದ್ದಾನೆ. ಇದೀಗ ಬಸ್​ ಮಾಲೀಕ 55 ಸಾವಿರ ರೂಪಾಯಿ ಖರ್ಚು ಮಾಡಿ ಹೊಸ ಸಿಪಿಯು ಅನ್ನು ಅಳವಡಿಸಿದ್ದಾರೆ. ಅಲ್ಲದೆ, ಕಂಡಕ್ಟರ್​ ವಿರುದ್ಧ ದೂರು ಸಹ ದಾಖಲಿಸಿದ್ದಾರೆ.

ಬಸ್​ನ ಡಿಸ್​​ಪ್ಲೇ ಬೋರ್ಡ್​ನಲ್ಲಿ ಕೆಟ್ಟ ಬೈಗುಳ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆಯಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net