ಹೋಟೆಲ್​​ನಲ್ಲಿ ಅಗ್ನಿ ದುರಂತ: ಮಾಲೀಕ, ವ್ಯವಸ್ಥಾಪಕನ ಅರೆಸ್ಟ್| Kolkata hotel

Kolkata hotel
Published on

Kolkata Hotel: 14 ಜನರು ಸಾವನ್ನಪ್ಪಿದ ಭೀಕರ ಬೆಂಕಿ ಅವಘಡಕ್ಕೆ ಕಾರಣವಾದ ಕೋಲ್ಕತ್ತಾ ಹೋಟೆಲ್‌ನ ಮಾಲೀಕ ಮತ್ತು ಮ್ಯಾನೇಜರ್​​ನ್ನು ಪೊಲೀಸರು ಗುರುವಾರ(ಮೇ.1) ಬಂಧಿಸಿದ್ದಾರೆ.

ಕೊಲ್ಕತ್ತಾ ಹೋಟೆಲ್​​ನಲ್ಲಿ ಮಂಗಳವಾರ (ಏ.29) ಸಂಭವಿಸಿದ ಬೆಂಕಿ ಅಪಘಾತದಲ್ಲಿ 14 ಜನರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದರು. ರಿತುರಾಜ್ ಹೋಟೆಲ್ ಮಾಲೀಕ ಆಕಾಶ್ ಚಾವ್ಲಾ ಮತ್ತು ಮ್ಯಾನೇಜರ್ ಗೌರವ್ ಕಪೂರ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಲ್ಕತ್ತಾ ಪೊಲೀಸರು ಈ ಇಬ್ಬರ ವಿರುದ್ಧ ಸ್ವಯಂ ಪ್ರೇರಿತ ಎಫ್‌ಐಆರ್ ದಾಖಲಿಸಿದ್ದಾರೆ. ಹೋಟೆಲ್​​ನಲ್ಲಿ ಪತ್ತೆಯಾಗಿರುವ 14 ಮೃತದೇಹಗಳಲ್ಲಿ 12 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ಉಳಿದ ಇಬ್ಬರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ. ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net