

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಬಲಿಪಗುಳಿಯಲ್ಲಿರುವ ಹಾಳೆ ತಟ್ಟೆ ತಯಾರಿಕಾ ದಾಸ್ತಾನು ಘಟಕದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ದಾಸ್ತಾನಿಟ್ಟ ಸೊತ್ತುಗಳು ಸುಟ್ಟು ಕರಕಲಾಗಿವೆೆ.
ಗುರುವಾರ ಬೆಳಗ್ಗಿನ ಜಾವ ನಾಲ್ಕು ಗಂಟೆ ವೇಳೆಗೆ ಕಟ್ಟಡದ ಮೇಲ್ಭಾಗದಲ್ಲಿದ್ದ ದಾಸ್ತಾನು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ವಿಚಾರ ಗಮನಕ್ಕೆ ಬರುವಾಗ ಬೆಳಗ್ಗೆ 6ಗಂಟೆ ಆಗಿದೆ. ಫ್ಯಾಕ್ಟರಿಯಿಂದ ದಟ್ಟ ಹೊಗೆ ಆವರಿಸುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.
ಅಷ್ಟರಲ್ಲಾಗಲೇ ಕಟ್ಟಡದಲ್ಲಿದ್ದ ಹಲವು ಮೆಷಿನ್ ಮತ್ತು ಹಾಳೆತಟ್ಟೆಗಳು ಸುಟ್ಟು ಕರಕಲಾಗಿವೆ.