PHOTOS| ನವಿಮುಂಬೈನ 21 ಮಹಡಿ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ: ಹೊತ್ತಿ ಉರಿದ 20ನೇ ಮಹಡಿ

Fire in Navi Mumbai high-rise 8 FEB 20
Published on

ಥಾಣೆ: ನವಿಮುಂಬೈನ ಪಾಮ್ ಬೀಜ್​ ರಸ್ತೆಯಲ್ಲಿರುವ ಸೆಕ್ಟರ್ 44ರ ನೆರುಲ್ ಸೀವುಡ್ಸ್​ ಎಂಬಲ್ಲಿ ಶನಿವಾರ 21 ಮಹಡಿಯ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ ಎಂದು ಅಗ್ನಿಶಾಮಕ ಸೇವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 6.30ರ ಹೊತ್ತಿಗೆ ಬಹುಮಹಡಿ ಕಟ್ಟಡದ 20ನೇ ಮಹಡಿಯಲ್ಲಿ ಬೆಂಕಿಯ ಜ್ವಾಲೆ ಹೊರಹೊಮ್ಮಿದ್ದು, ಇಡೀ ಮಹಡಿಯನ್ನು ಆವರಿಸಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು, ಪ್ರಗತಿಯಲ್ಲಿದೆ.

ಕನಿಷ್ಠ 6 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಕೆಲಸ ಮಾಡುತ್ತಿವೆ. ಇದುವರೆಗೆ ಯಾವುದೇ ಪ್ರಾಣ ಹಾನಿಯ ವಿವರವಿಲ್ಲ ಎಂದು ಥಾನೆ ಮುನ್ಸಿಪಾಲಿಟಿಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್ ಕದಂ ಹೇಳಿದ್ದಾರೆ. (ಏಜೆನ್ಸೀಸ್)

Thane Fire Accident 4 8 FEB 20
Thane Fire Accident 5 8 FEB 20
Thane Fire Accident 8 FEB 20

ಥಾಣೆ: ನವಿಮುಂಬೈನ ಪಾಮ್ ಬೀಜ್​ ರಸ್ತೆಯಲ್ಲಿರುವ ಸೆಕ್ಟರ್ 44ರ ನೆರುಲ್ ಸೀವುಡ್ಸ್​ ಎಂಬಲ್ಲಿ ಶನಿವಾರ 21 ಮಹಡಿಯ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ ಎಂದು ಅಗ್ನಿಶಾಮಕ ಸೇವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 6.30ರ ಹೊತ್ತಿಗೆ ಬಹುಮಹಡಿ ಕಟ್ಟಡದ 20ನೇ ಮಹಡಿಯಲ್ಲಿ ಬೆಂಕಿಯ ಜ್ವಾಲೆ ಹೊರಹೊಮ್ಮಿದ್ದು, ಇಡೀ ಮಹಡಿಯನ್ನು ಆವರಿಸಿತ್ತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು, ಪ್ರಗತಿಯಲ್ಲಿದೆ.

ಕನಿಷ್ಠ 6 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿದ್ದು, ಬೆಂಕಿ ನಂದಿಸುವ ಕೆಲಸ ಮಾಡುತ್ತಿವೆ. ಇದುವರೆಗೆ ಯಾವುದೇ ಪ್ರಾಣ ಹಾನಿಯ ವಿವರವಿಲ್ಲ ಎಂದು ಥಾನೆ ಮುನ್ಸಿಪಾಲಿಟಿಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಸಂತೋಷ್ ಕದಂ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net