ಬೆಂಕಿ ಕಾಣಿಸಿಕೊಂಡು ಗ್ಯಾಸ್ ಪೈಪ್‌ಗಳು ಭಸ್ಮ

20 njd news 03
ನಂಜನಗೂಡಿನಲ್ಲಿ ಖಾಲಿ ಜಾಗದಲ್ಲಿ ಇರಿಸಿದ್ದ ಗ್ಯಾಸ್ ಪೈಪುಗಳಿಗೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿರುವುದು.
Published on

ನಂಜನಗೂಡು: ಪಟ್ಟಣದ ಆರ್.ಪಿ. ರಸ್ತೆಯಲ್ಲಿರುವ 18ನೇ ಕ್ರಾಸ್‌ನಲ್ಲಿ ಇರಿಸಿದ್ದ ಕಾಲಿ ಪೈಪುಗಳಿಗೆ ಗುರುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟು ಭಸ್ಮವಾಗಿದೆ.

ಗ್ಯಾಸ್ ಕಂಪನಿಯೊಂದಕ್ಕೆ ಸೇರಿದ ಪೈಪುಗಳು ಇವಾಗಿದ್ದು, ಮಧ್ಯಾಹ್ನ ಇದ್ದಕ್ಕಿದ್ದ ಹಾಗೆ ಬೆಂಕಿ ಅವಘಡ ಸಂಭವಿಸಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿ ಅಕ್ಕಪಕ್ಕದ ಮನೆಗಳವರು ಗಾಬರಿಗೊಂಡರು. ಸುತ್ತಮುತ್ತಲ ಸಾರ್ವಜನಿಕರು ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ವಾಹನ ಬರುವವರೆಗೆ ಎಲ್ಲ ಪೈಪ್‌ಗಳು ಸುಟ್ಟು ಕರಕಲಾಗಿದ್ದವು. ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಡಿವೈಎಸ್ಪಿ ರಘು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಪಿಎಸ್‌ಐ ಪ್ರಕಾಶ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net