ಸೋಂಕಿತಳ ಜತೆ ವೈದ್ಯರ ಹೆಸರು ತಳುಕು ಹಾಕಿದ ವಕೀಲರ ವಿರುದ್ಧ ಎಫ್​ಐಆರ್​!

POLICE-FIR
Published on

ಹಾಸನ: ಕರೊನಾ ಸೋಂಕಿತ ಮಹಿಳೆಯ ಮಾಹಿತಿ ಬಹಿರಂಗ ಪಡಿಸಿದ ಆರೋಪದಡಿ ವಕೀಲರೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹಿಮ್ಸ್ ಆಸ್ಪತ್ರೆಯ ಚರ್ಮ ವೈದ್ಯ ಡಾ. ಸುರೇಶ್ ನೀಡಿದ ದೂರಿನ ಮೇರೆಗೆ ವಕೀಲ ದೇವರಾಜೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ. ರೋಗಿ ಮತ್ತು ನಮ್ಮ ನಡುವೆ ಸಂಪರ್ಕ ಇಲ್ಲದಿದ್ದರೂ ವೈಯಕ್ತಿಕ ದ್ವೇಷಕ್ಕೆ ವಕೀಲರು ಇಲ್ಲಸಲ್ಲದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ವೈದ್ಯರು ಆರೋಪಿಸಿದ್ದಾರೆ.

ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತಾ ಕ್ರಮ ಗೊಂಡಿದ್ದೇವೆ. ಸೋಂಕಿತ P. 2025 ನನ್ನ ಸಹೋದರಿ. ಅವರ ಜತೆ ನಾವು ಯಾವುದೇ ಸಂಪರ್ಕ ಹೊಂದಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಎರಡು ವರ್ಷದಿಂದ ಮುಖಾಮುಖಿ ಭೇಟಿಯೇ ಆಗಿಲ್ಲ. ಹೀಗಿದ್ದರೂ ದೇವರಾಜೇಗೌಡ ನಮ್ಮ ಮೇಲಿನ ವೈಯಕ್ತಿಕ ದ್ವೇಷಕ್ಕೆ ಎಲ್ಲರ ಹೆಸರನ್ನೂ ಬಹಿರಂಗ ಪಡಿಸಿದ್ದಾರೆ. ರೋಗಿ ಹೆಸರನ್ನು ಮಾಧ್ಯಮಗಳಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಿ ನೋವುಂಟು ಮಾಡಿದ್ದಾರೆ ಎಂದು ಡಾ. ಸುರೇಶ್​ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net