ಮಮತಾ ವಾಣಿಜ್ಯ ವಿದ್ಯಾ ಸಂಸ್ಥೆಗೆ ಶೇ. 90ರಷ್ಟು ಫಲಿತಾಂಶ

je721538035802367-abc
Published on

ರಾಣೆಬೆನ್ನೂರ: ಕಳೆದ ಜುಲೈನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಿದ ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ನಗರದ ಮಮತಾ ವಾಣಿಜ್ಯ ವಿದ್ಯಾಸಂಸ್ಥೆಗೆ ಶೇ. 90ರಷ್ಟು ಫಲಿತಾಂಶ ದೊರೆತಿದೆ.
ಪರೀಕ್ಷೆಗೆ ಹಾಜರಾದ ಒಟ್ಟು 124 ವಿದ್ಯಾರ್ಥಿಗಳಲ್ಲಿ 24 ಉನ್ನತ, 33 ಪ್ರಥಮ, 38 ದ್ವಿತೀಯ, 18 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆಂಗ್ಲ ಬೆರಳಚ್ಚು ಪ್ರಥಮ ದರ್ಜೆಯಲ್ಲಿ ತೇಜಸ್ವಿನಿ ಬಾಳಿಕಾಯಿ ಶೇ.96, ಅಭಿಷೇಕ ಲಮಾಣಿ ಶೇ. ಶೇ .92, ವಿದ್ಯಾ ಕ್ಯಾದಗಿ ಶೇ. 92, ಗಾಯತ್ರಿ ಗುಲಗಂಜಿ ಶೇ. 92, ಪ್ರೌಢ ದರ್ಜೆಯಲ್ಲಿ ಗೀತಾ ಬ್ಯಾಡಗಿ ಶೇ. 92, ತುಳಜಾ ಚಿನ್ನಿಕಟ್ಟಿ ಶೇ. 92 ಅಂಕಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯ ಎಸ್.ಬಿ. ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net