ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ

trafic story
ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿರುವ ಸಂಚಾರಿ ಪೊಲೀಸರು.
Published on

> ಕಿರುವಾರ ಎಸ್​. ಸುದರ್ಶನ್​ ಕೋಲಾರ

ವಾಹನ ಸವಾರರು ಸಂಚಾರ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ನಿಯಮ ಉಲ್ಲಂಘನೆ ಮಾದರೆ ದಂಡ ಬೀಳುವುದಂತು ಗ್ಯಾರಂಟಿ!

ಹೌದು. ಕೋಲಾರ ಜಿಲ್ಲಾ ಪೊಲೀಸ್​ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂನೆ ಪ್ರಕರಣ ಹೆಚ್ಚಾಗಿವೆ. ಈ ವರ್ಷದಲ್ಲೇ 7 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಹಾಗಾಗಿ ನಗರ ಸೇರಿ ಜಿಲ್ಲೆಯಾದ್ಯಂತ ವಾಹನ ಸಂಚಾರ ನಿಯಮಗಳು ಉಲ್ಲಂನೆ ತಡೆಗಟ್ಟಲು ಪೊಲೀಸ್​ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರು ಉಲ್ಲಂನೆಗೂ ಮುಂಚೆ ಎಚ್ಚರದಿಂದ ಇರುವುದು ಸೂಕ್ತ ಎಂದು ತಿಳಿವಳಿಕೆ ನೀಡಿದೆ.

ಜಿಲ್ಲಾಕೇಂದ್ರದಲ್ಲಿ ಜನಸಂಖ್ಯೆ ಹೆಚ್ಚಾದಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೈಗಾರಿಕಾ ಪ್ರದೇಶಗಳು, ಹೊಸಹೊಸ ಬಡಾವಣೆಗಳು ತಲೆಯೆತ್ತುತ್ತಿವೆ. ಹೀಗೆ ಕೋಲಾರ, ಮುಳಬಾಗಿಲು, ಕೆಜಿಎ್​ ನಗರ, ಮಾಲೂರು, ಬಂಗಾರಪೇಟೆ, ಶ್ರೀನಿವಾಸಪುರ ಪಟ್ಟಣಗಳು ಮತ್ತು ವೇಮಗಲ್​ ಪಟ್ಟಣ ಪಂಚಾಯಿತಿಗಳು ವ್ಯಾಪ್ತಿಯನ್ನು ವರ್ಷದಿಂದ ವರ್ಷಕ್ಕೆ ಹಿಗ್ಗಿಸಿಕೊಳ್ಳುತ್ತಿವೆ. ಜನ ಸಂಖ್ಯೆ ಹೆಚ್ಚಾದಂತೆ ದ್ವಿ ಚಕ್ರ ವಾಹನ, ಕಾರುಗಳು, ಸರಕು ಸಾಗಣೆ ವಾಹನಗಳೂ ಹೆಚ್ಚುತ್ತಿವೆ. ಹಾಗಾಗಿ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಉಲ್ಲಂನೆ ಕಂಡು ಬಂದ ಕೂಡಲೇ ಮೊಬೈಲ್​ನಲ್ಲಿ ೋಟೋ ಕ್ಲಿಕಿಸಿ ಪ್ರಕರಣ ದಾಖಲಿಸಿಕೊಳ್ಳುವುದರೊಂದಿಗೆ ದಂಡ ವಿಧಿಸುತ್ತಿದ್ದಾರೆ.

ಅಪಘಾತ ಸಂಭವ

ನಿಯಮ ಉಲ್ಲಂಘಿಸುವುದರಿಂದ ಅಪಘಾತದಂತಹ ಅವಘಡ ಸಂಭವಿಸುತ್ತಿದ್ದು, ಅನೇಕರು ಮೃತಪಡುತ್ತಿದ್ದಾರೆ. ಇನ್ನೂ ಕೆಲವರು ಗಂಭೀರ ಗಾಯಗೊಂಡು, ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ನಗರದಲ್ಲಂತೂ ನಿಯಮಗಳ ಉಲ್ಲಂನೆ ದಿನೇದಿನೆ ಹೆಚ್ಚುತ್ತಿದೆ. ಆದ್ದರಿಂದ ಎಚ್ಚೆತ್ತಿರುವ ಪೊಲೀಸರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಶಾಲಾ&ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತೆ, ಹೆಲ್ಮೆಟ್​ ಧರಿಸುವ ಕುರಿತು ಅಭಿಯಾನ ಕೈಗೊಂಡಿದ್ದಾರೆ.

ನಿರ್ಲಕ್ಷ್ಯ ಸಲ್ಲ

ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಠಾಣೆಯಿಂದ ದೂರವಾಣಿ ಕರೆ ಮಾಡಿ, ದಂಡ ಪಾವತಿ ಮಾಡುವಂತೆ ಸೂಚಿಸಲಾಗುತ್ತದೆ. ಠಾಣೆಗೆ ಬರುವವರಿಗೆ ಅಲ್ಲಿಯೂ ಅರಿವು ಮೂಡಿಸಲಾಗುತ್ತಿದೆ. ಠಾಣೆಗೆ ಬಾರದೆ ಇದ್ದರೆ, ಪ್ರಕರಣವನ್ನು ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು.

ಸುಗ್ಗಿ ವೇಳೆ ವಾಹನ ದಟ್ಟಣೆ

ಜೂನ್​ ತಿಂಗಳಲ್ಲಿ ಕೋಲಾರದಲ್ಲಿ ಟೊಮ್ಯಾಟೊ, ಶ್ರೀನಿವಾಸಪುರದಲ್ಲಿ ಮಾವು ಸುಗ್ಗಿ ಪ್ರಾರಂಭವಾಗಲಿದೆ. ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಲಾರಿಗಳು, ಸರಕು ಸಾಗಿಸಿಕೊಂಡು ಬರುವ ವಾಹನಗಳ ದಟ್ಟಣೆ ಹೆಚ್ಚಾಗುತ್ತದೆ. ಆಗ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಳಲಿದೆ. ಕೋಲಾರ ಎಪಿಎಂಸಿ ಬಳಿ ಮಾಲೂರು ರಸ್ತೆ, ಶ್ರೀನಿವಾಸಪುರದಿಂದ ಚಿಂತಾಮಣಿ ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗಿ, ಸಂಚಾರಕ್ಕೆ ಅಡಚಣೆ ಉಂಟಾಗಲಿದೆ.

* ಗೊತ್ತಿದ್ದೂ ಉಲ್ಲಂಘನೆ

ಕೋಲಾರ ನಗರದ ಎಂಜಿ ರಸ್ತೆ, ದೊಡ್ಡ ಪೇಟೆ ರಸ್ತೆ, ಅಮ್ಮವಾರಿ ಪೇಟೆ, ಬ್ರಹ್ಮಣರ ಬೀದಿ ಹೀಗೆ ಸಾಕಷ್ಟು ರಸ್ತೆಗಳು ಬಹಳ ಕಿರಿದಾಗಿವೆ. ಕಿರಿಕಿರಿಯಾಗಿರುವ ರಸ್ತೆಗಳಲ್ಲಿ ಏಕ ಮುಖ ಸಂಚಾರ ಜಾರಿ ಮಾಡಲಾಗಿದ್ದು, ಕೆಲವರು ವಿಚಾರ ಗೊತ್ತಿದ್ದರೂ ನಿಯಮ ಉಲ್ಲಂಘಿಸುತ್ತಿರುವುದನ್ನು ಕಂಡುಬಂದಿದೆ. ಪೊಲೀಸರು ಅಂತಹ ವಾಹನಗಳ ೋಟೋ ತೆಗೆದು ಪೋರ್ಟಲ್​ನಲ್ಲಿ ಅಪ್​ಲೋಡ್​ ಮಾಡಿ ದಂಡ ವಿಧಿಸುತ್ತಿದ್ದಾರೆ.

ಕೋಟ್​..

ಸಂಚಾರಿ ನಿಯಮ ಪಾಲನೆಯಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದು. ನಿಯಮಗಳ ಉಲ್ಲಂನೆಯ ವಿರುದ್ಧ ಕ್ರಮವಹಿಸಿದ್ದು, ಸಾರ್ವಜನಿಕರು ಸಹಕರಿಸಬೇಕು. ಆ ಮೂಲಕ ಸಂಭವಿಸುವ ಅನಾಹುತಗಳಿಂದ ದೂರ ಉಳಿಯಬಹುದು.

- ಬಿ.ನಿಖಿಲ್​, ಎಸ್ಪಿ, ಕೋಲಾರ

ವರ್ಷ ಪ್ರಕರಣಗಳ ಸಂಖ್ಯೆ

2024 33,183

2025 7000ಕ್ಕೂ ಹೆಚ್ಚು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net