ಯಶ್​ ಪುತ್ರನ ಹೆಸರೇನಿರಬಹುದು?; ರಾಧಿಕಾ ನೀಡಿದ್ದಾರೊಂದು ಸುಳಿವು...

collage (24)
Published on

ರಾಕಿಂಗ್​ ಸ್ಟಾರ್ ಯಶ್​ ಮತ್ತು ರಾಧಿಕಾ ಪಂಡಿತ್​ ದಂಪತಿಯ ಮೊದಲ ಹೆಣ್ಣು ಮಗುವಿಗೆ ಐದಾರು ತಿಂಗಳ ಬಳಿಕ ಐರಾ ಎಂಬ ಹೆಸರನ್ನು ನಾಮಕರಣ ಮಾಡಲಾಗಿತ್ತು. ಇದೀಗ ಜೂನಿಯರ್​ ಯಶ್​ ಸರದಿ. ಹೌದು, ಕಳೆದ ವರ್ಷ ಅಕ್ಟೋಬರ್​ನಲ್ಲಿ ಜನಿಸಿದ ಜೂನಿಯರ್ ಯಶ್​ಗೆ ಈ ವರೆಗೂ ನಾಮಕರಣ ಆಗಿಲ್ಲ ಎಂಬುದಕ್ಕಿಂತ, ಆ ಪುಟಾಣಿಯ ಹೆಸರನ್ನು ಕುಟುಂಬ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಇದೀಗ ಅದಕ್ಕೆ ಸಮಯ ಬಂದಿದೆ ಎಂದಿದ್ದಾರೆ ರಾಧಿಕಾ ಪಂಡಿತ್​.

ಅಚ್ಚರಿ ವಿಚಾರ ಏನೆಂದರೆ ಸೋಶಿಯಲ್​ ಮೀಡಿಯಾದಲ್ಲಿ ನಿತ್ಯ ಸಾವಿರಾರು ಮಂದಿ ಅಭಿಮಾನಿಗಳು ಜೂನಿಯರ್ ಯಶ್​ ಹೆಸರೇನು ಎಂದೇ ರಾಧಿಕಾಗೆ ಪ್ರಶ್ನಿಸುತ್ತಿದ್ದರು. ಇದೀಗ ಆ ಎಲ್ಲ ಪ್ರಶ್ನೆಗಳಿಗೆ ರಾಧಿಕಾ ಉತ್ತರಿಸಲಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ಹೆಸರನ್ನು ಬಹಿರಂಗ ಮಾಡುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಸುಳಿವು ನೀಡಿದ್ದಾರೆ.

ಇನ್ನು ಸೋಷಿಯಲ್​ ಮೀಡಿಯಾದಲ್ಲಿ ಯಶ್​ ಪುತ್ರನ ಹೆಸರು ಆಯುಷ್​ ಎಂದು ಇಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಆ ಬಗ್ಗೆಯೂ ರಾಧಿಕಾ ಪ್ರತಿಕ್ರಿಯಿಸಿದ್ದು, ಆಯುಷ್​ ಎಂಬ ಹೆಸರು ಇಟ್ಟಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಸದ್ಯ ಇ ವಿಚಾರ ಯಶ್​ ಮತ್ತು ರಾಧಿಕಾ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದ್ದು, ಹೆಸರೇನಿರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net