

ಬೆಂಗಳೂರು: ಕೆಎಸ್‌ಆರ್‌ಟಿಸಿ ತಾಂತ್ರಿಕ ಸಹಾಯಕ ಹುದ್ದೆಗಳ ದಾಖಲಾತಿ ಪರಿಶೀಲನೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಅಂತಿಮ ಅವಕಾಶ ನೀಡಲಾಗಿದೆ.
ತಾಂತ್ರಿಕ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲಾತಿ ಹಾಗೂ ದೇಹದಾರ್ಢ್ಯತೆ ಪರಿಶೀಲಿಸಲು ಡಿ.೨೬ ರಿಂದ ೨೮ ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಕೆಲವೊಂದು ಅಭ್ಯರ್ಥಿಗಳು ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ಅಂತಿಮ ಅವಕಾಶವಾಗಿ ಗೈರುಹಾಜರಾದ ಅಭ್ಯರ್ಥಿಗಳಿಗೆ ೨೦೨೪ ಜ.೩ ರಂದು ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ದಾಖಲಾತಿ/ದೇಹದಾರ್ಢ್ಯತೆ ಪರಿಶೀಲಿಸಲು ನಿರ್ಧರಿಸಲಾಗಿದೆ. ಈ ಕುರಿತು ಗೈರುಹಾಜರಾದ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗಿದೆ. ಗೈರುಹಾಜರಾದ ಅಭ್ಯರ್ಥಿಗಳು ನಿಗಮದ ಅಧಿಕೃತ ವೆಬ್-ಸೈಟ್ ಆದ ಠ್ಟಠ್ಚ್ಜಿಟಚಿ.್ಚಟಞ ರಲ್ಲಿ ಕರೆಪತ್ರ ಡೌನ್-ಲೋಡ್ ಮಾಡಿಕೊಂಡು ಕರೆಪತ್ರದಲ್ಲಿ ನಮೂದಿಸಿರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ನಿಗಧಿತ ದಿನಾಂಕದಂದು ತಪ್ಪದೇ ಹಾಜರಾಗಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರಾರಸಾ ನಿಗಮದ ಸಹಾಯವಾಣಿ ಸಂಖ್ಯೆ 080 22221321-321, 7760990061, 7760990044 & 7760981930 ಗಳಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ.