ನಟ ಯಶ್​ ಅವರ ಫಿಲಂ ಸಿಟಿ ಕನಸಿಗೆ ನೀರೆರೆದ ಸಿಎಂ ಯಡಿಯೂರಪ್ಪ: ಬಜೆಟ್​ನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಮೀಸಲು

Yash
Published on

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಅವರ ಸಿನಿಮಾ ಸ್ಟುಡಿಯೋ ನಿರ್ಮಾಣದ ಕನಸಿಗೆ ಸಿಎಂ ಯಡಿಯೂರಪ್ಪ ಬಜೆಟ್​ನಲ್ಲಿ ಬಜೆಟ್​ನಲ್ಲಿ ನೀರೆರೆದಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ಯಶ್​ ಅವರು ಬೆಂಗಳೂರಿನಲ್ಲಿ ನಮಗೆ ಒಂದು ಸುಸಜ್ಜಿತ ಸಿನಿಮಾ ಸ್ಟುಡಿಯೋ ನಿರ್ಮಿಸಿಕೊಡಿ. ನಮ್ಮ ಹುಡುಗರು ಯಾವ ರೀತಿ ಭಾರತೀಯ ಸಿನಿಮಾ ಚಿತ್ರರಂಗವನ್ನು ಆಳುತ್ತಾರೆ ನೋಡಿ. ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತದೆ ಎಂದು ಸಿಎಂ ಅವರಿಗೆ ಮನವಿ ಮಾಡಿದ್ದರು.

ವೇದಿಕೆಯಲ್ಲಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಈ ಮನವಿ ಮನಮುಟ್ಟಿದ ಹಿನ್ನೆಲೆಯಲ್ಲಿ ಬಜೆಟ್​ನಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಉತ್ತಮ ಸ್ಟುಡಿಯೋಗಳಿವೆ. ಆದರೆ ಪ್ರತಿಭಾನ್ವಿತರು ಇರುವ ಕರ್ನಾಟಕದಲ್ಲಿ ಸುಸಜ್ಜಿತ ಸ್ಟುಡಿಯೋ ಇಲ್ಲ. ಹೀಗಿದ್ದರೂ ನಮ್ಮ ಹುಡುಗರು ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ನಟ ಯಶ್​ ಹೇಳಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net