ತುಂಬಿದ ಕೃಷ್ಣೆ, ಮಲಪ್ರಭೆ ಒಡಲು

17 ksm-1
ಕೃಷ್ಣಾ ನದಿ ವೀಕ್ಷಿಸುತ್ತಿರುವ ಪ್ರವಾಸಿಗರು.
Published on

ಕೂಡಲಸಂಗಮ: ಕಳೆದ ಎರಡು ದಿನದಿಂದ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಬಿಟ್ಟಿದ್ದರಿಂದ ನಾರಾಯಣಪೂರ ಜಲಾಶಯದ ಹಿನ್ನೀರು ತುಂಬಿಕೊಂಡಿದೆ. ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪದ ಬಳಿ ನೀರಿನ ಜಲರಾಸಿ ವಿಶಾಲವಾಗಿ ಹರಡಿಕೊಂಡಿದೆ.

ಮೂರು ತಿಂಗಳಿಂದ ಕೃಷ್ಣೆ, ಮಲಪ್ರಭಾ ನದಿ ಸಂಪೂರ್ಣ ಬರಿದಾಗಿದ್ದವು. 20 ದಿನಗಳ ಹಿಂದ ಮಲಫ್ರಭಾ ನದಿಗೆ ಸ್ವಲ್ಪ ನೀರು ಬಂದಿತ್ತು. ಆದರೆ ಎರಡು ದಿನದಿಂದ ಆಲಮಟ್ಟಿ ಜಲಾಶಯದಿಂದ ನೀರು ಬರುತ್ತಿರುವುದರಿಂದ ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮದ ಬಸವಣ್ಣನ ಐಕ್ಯ ಮಂಟಪ ಬಳಿ ಸಂಪೂರ್ಣ ತುಂಬಿಕೊಂಡು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಬುಧವಾರ ರಜೆಯ ದಿನವಾದರಿಂದ ಬೆಳಗ್ಗೆಯಿಂದಲೇ ತಂಡೋಪ ತಂಡವಾಗಿ ಪ್ರವಾಸಿಗರು ಸುಕ್ಷೇತ್ರಕ್ಕೆ ಆಗಮಿಸಿ ನದಿಯ ವಿಹಂಗಮ ದೃಶ್ಯ ನೋಡಿ ಸಂಭ್ರಮಿಸಿದರು.

ಸಂಗಮೇಶ್ವರ ದೇವಾಲಯ ಬಳಿಯ ಕೃಷ್ಣಾ, ಮಲಪ್ರಭಾ ನದಿ ದಡ, ಕೂಡಲಸಂಗಮ ಅಡವಿಹಾಳ ಸೇತುವೆ ಮೇಲೆ ಪ್ರವಾಸಿಗರ ದಂಡೆ ಇತ್ತು. ಕೆಲವರು ನದಿ ಹರಿಯುವ ದೃಶ್ಯ ನೋಡಿ ಸಂಭ್ರಮಿಸಿದರೆ, ಇನ್ನೂ ಕೆಲ ಪ್ರವಾಸಿಗರು ಸೆಲ್ಫಿ ತೆಗೆದುಕೊಂಡರು.

ಕೃಷ್ಣಾ ನದಿಯಲ್ಲಿ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ನದಿ ದಡದ ರೈತರು ನದಿಯಲ್ಲಿ ಅಳವಡಿಸಿದ್ದ ಪಂಪಸೆಟ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿರುವು ಕಂಡು ಬಂದಿದೆ. ನದಿ ದಡದ ಕೆಲವು ರೈತರ ಭೂಮಿಗೆ ಕೃಷ್ಣಾ ನದಿ ನೀರು ನುಗ್ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net