ಟ್ಯಾಟೂ ಕಲಾವಿದನ ವಿರುದ್ಧ ದೂರು ದಾಖಲು

Crime Logo
Published on

ಬೆಂಗಳೂರು: ಪೊಲೀಸರ ಬಗ್ಗೆ ಅವಹೇಳನ ಮಾಡುವ ಬರಹದ ಟ್ಯಾಟೂ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪದಡಿ ಟ್ಯಾಟೂ ಕಲಾವಿದನ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಿಗೇಡ್ ರಸ್ತೆಯ ಟ್ಯಾಟೂ ಸ್ಟುಡಿಯೊ ಹೊಂದಿರುವ ಕಲಾವಿದ ರಿತೇಶ್ ಅಘಾರಿಯಾ ಎಂಬಾತನ ವಿರುದ್ಧ ಶಾಂತಿಗೆ ಭಂಗ, ಉದ್ದೇಶ ಪೂರ್ವಕ ಅವಮಾನ ಆರೋಪದಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ನೀಡಿದ್ದಾರೆ.
ಕಲಾವಿದ ರಿತೇಶ್ ಅಘಾರಿಯ ವ್ಯಕ್ತಿಯೊಬ್ಬರ ಎದೆಯ ಮೇಲೆ ಪೊಲೀಸರನ್ನು ಅವಹೇಳನ ಮಾಡುವ ರೀತಿಯ ಬರಹವನ್ನು ಟ್ಯಾಟೂ ಹಾಕಿದ್ದ. ಈ ಫೋಟೋವನ್ನು ತನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ. ಸಾರ್ವಜನಿಕರು ಈ ಪೋಸ್ಟ್ ಗಮನಿಸಿ ಎಕ್ಸ್ ಖಾತೆಯಲ್ಲಿ ನಗರ ಪೊಲೀಸರಿಗೆ ಟ್ಯಾಗ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಈ ಮಾಹಿತಿ ಮೇರೆಗೆ ಟ್ಯಾಟೂ ಕಲಾವಿದ ರಿತೇಶ್ ಅಘಾರಿಯಾ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net