ಸ್ವಾತಂತ್ರೃ ಹೋರಾಟಗಾರ ವಸಂತರಾವ ಸ್ಮರಣೋತ್ಸವ

20-RNR-05
Published on

ರಾಣೆಬೆನ್ನೂರ: ಜಮಖಂಡಿಯ ಸ್ವಾತಂತ್ರೃ ಹೋರಾಟಗಾರ ವಸಂತರಾವ ಉರ್ಫ ವಿಶ್ವನಾಥ ಫೋಡ್ಸೇ ಸ್ಮರಣೆ ಅಂಗವಾಗಿ ತಾಲೂಕಿನ ಕುಮಾರಪಟ್ಟಣದ ಸ್ವಾತಂತ್ರೃ ಹೋರಾಟಗಾರರ ಸಂಶೋಧನೆ ಕೇಂದ್ರದ ಆವರಣದಲ್ಲಿ ಭಾನುವಾರ ಸ್ಮರಣೋತ್ಸವ ಆಚರಿಸಲಾಯಿತು.
ಕುಮಾರಪಟ್ಟಣ ಪೊಲೀಸ್ ಠಾಣೆ ಪಿಎಸ್‌ಐ ಸಂಗೀತಾ ದೊಡ್ಡಮನಿ ಮಾತನಾಡಿ, ಮುಂದಿನ ಪೀಳಿಗೆಗೆ ಸ್ವಾತಂತ್ರೃ ಹೋರಾಟಗಾರರನ್ನು ಪರಿಚಯಿಸಲು ಚಿತ್ರಕಲಾವಿದ ಜಿ.ಜೆ. ಮೆಹೆಂದಳೆಯವರ ಶ್ಲಾಘನೀಯ ಎಂದರು.
ಚಿತ್ರಕಲಾವಿದ ಡಾ. ಜಿ.ಜೆ. ಮೆಹಂದಳೆ, ಧನ್ಯೋಸ್ಮೀ ಭರತಭೂಮಿ ತಂಡದ ಜಿಲ್ಲಾಧ್ಯಕ್ಷ ಚರಣ ಅಂಗಡಿ, ವಕೀಲ ರಮೇಶ, ವಿಜಯ ಉದಗಟ್ಟಿ, ಕಲ್ಲೇಶ, ಮಂಜುನಾಥ, ವಿನಯ, ಜಯಶ್ರೀ ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net