

ಕೋಲಾರ: ಜಿಲ್ಲೆಯನ್ನು ಚಳವಳಿ ನಾಡು ಎಂದು ಇಂದಿಗೂ ಕರೆಯಲ್ಪಡುತ್ತಿದ್ದು, ಈಗಲೂ ಒಂದಲ್ಲ ಒಂದು ರೀತಿ ಹೋರಾಟಗಳು ನಡೆಯುತ್ತಲೇ ಇವೆ. ನೀರಿಗಾಗಿ ಹೋರಾಟ ಮುಂದುವರೆದಿದ್ದು, ಶುದ್ಧ ಕುಡಿಯುವ ನೀರು ಹರಿಸದಿದ್ದರೆ ಪ್ರೋ.ನಂಜುಂಡಸ್ವಾಮಿ ಹಾದಿಯಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂದ ಉಪಾಧ್ಯಕ್ಷ ಕೆ.ನಾರಾಯಣಗೌಡ ಎಚ್ಚರಿಸಿದರು.
ತಾಲೂಕಿನ ಲಕ್ಷಿ$್ಮಸಾಗರ ಕೆಸಿ ವ್ಯಾಲಿ ನೀರು ಹರಿಯುವ ಕೆರೆಯ ದಡದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರೋ.ನಂಜುಂಡಸ್ವಾಮಿ ನೆನಪಿನ ದಿನಾಚರಣೆಯಲ್ಲಿ ಮಾತನಾಡಿ, ಹೋರಾಟದ ಲವಾಗಿ ಕೆಸಿ ವ್ಯಾಲಿ ಯೋಜನೆ ಜಾರಿಗೆ ಬಂದಿದ್ದರೂ ಇದು ಜಿಲ್ಲೆಗೆ ಶಾಪವೋ, ವರದಾನವೋ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಹರಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿದೆ. ಎರಡು ಹಂತದಲ್ಲಿ ಶುದ್ಧೀಕರಣ ಮಾಡಿ ಹರಿಸುತ್ತಿರುವುದರಿಂದ ಸಮಸ್ಯೆಗಳು ಎದುರಾಗಿವೆ. ರೈತರು ಬೆಳೆಯುವ ತರಕಾರಿಗಳಲ್ಲಿ ವಿಷಕಾರಿ ಅಂಶ ಇದೆ ಎಂಬುದಕ್ಕೆ ಸಂಶೋಧನಾ ಸಂಸ್ಥೆಗಳ ಸಾಯಿದೆ. ಮೂರನೇ ಹಂತದ ಶುದ್ಧೀಕರಣಕ್ಕಾಗಿ ಹೋರಾಟ ನಿರಂತವಾಗಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಸಂದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಇಡೀ ದೇಶಕ್ಕೆ ಹಾಲು ಹಣ್ಣು, ತರಕಾರಿ, ರೇಷ್ಮೇ, ಚಿನ್ನ, ಮಾವು ಕೊಟ್ಟಂತಹ ಜಿಲ್ಲೆ ಕೋಲಾರ. ಕೆಸಿ ವ್ಯಾಲಿ ಯೋಜನೆಯು ರಾಜಕಾರಣಿಗಳಿಗೆ ಅನುಕೂಲವಾಯಿತಾದರು ರೈತರಿಗೆ ಶಾಪವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿ ವರ್ಷ ರೈತರ ಜೀವನದ ಜತೆ ಚೆಲ್ಲಾಟವಾಡುವ ನಕಲಿ ಬಿತ್ತನೆ ಬೀಜ ಕೀಟನಾಶಕ ರಸಗೊಬ್ಬರ ನಿಯಂತ್ರಣಕ್ಕೆ ಪ್ರಬಲ ಕಾನೂನು ಜಾರಿ ಮಾಡಬೇಕು. ಜಿಲ್ಲೆಯ ಜಿಲ್ಲಾಧಿಕಾರಿಗಳ ಅನುಮತಿ ನಂತರ ನರ್ಸರಿ ಹಾಗೂ ಅವಶ್ಯಕತೆಯಿರುವ ಬಿತ್ತನೆ ಬೀಜಗಳನ್ನು ವಿತರಣೆ ಮಾಡುವ ಕಾನೂನು ಜಾರಿ ಮಾಡಿದರೆ ಮಾತ್ರ ಅನ್ನದಾತನ ರಕ್ಷಣೆ ಸಾಧ್ಯ ಎಂದು ಹೇಳಿದರು.
ಸಂದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ಗೌಡ, ಮಂಗಸಂದ್ರ ತಿಮ್ಮಣ್ಣ, ಶಿವಾರೆಡ್ಡಿ, ಗಿರೀಶ್, ಪುತ್ತೇರಿ ರಾಜು, ಚಂದ್ರಪ್ಪ, ಸುಪ್ರೀಂ ಚಲ, ಮುನಿರಾಜು, ಶಶಿ , ಶೈಲಜ, ರಾದಮ್ಮ, ರತ್ನಮ್ಮ, ಶಾಂತಮ್ಮ, ವೆಂಕಟರತ್ನ ಇದ್ದರು.