ದೇಶದಲ್ಲಿ ಹಬ್ಬಗಳಿಗಿದೆ ಸಾಂಸ್ಕೃತಿಕ ಮಹತ್ವ

24sor2
ಸೊರಬದಲ್ಲಿ ಆಯೋಜಿಸಿದ್ದ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮನ್ನು ಕನ್ನಡ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಉದ್ಘಾಟಿಸಿದರು. ದೀಪಕ್, ಸತೀಶ್, ನಾಗು ಎಂ. ಪಾಟೀಲ್, ಮಲ್ಲಮ್ಮ ಇದ್ದರು.
Published on

ಸೊರಬ: ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ನಮ್ಮ ಜೀವನದಲ್ಲಿ ಸಂಸ್ಕೃತಿ, ಆಚಾರ, ವಿಚಾರಗಳು ತಮ್ಮದೇ ಆದ ಪ್ರಭಾವ ಬೀರಿವೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಪಟ್ಟಣದಲ್ಲಿ ಗುರುಕುಲ ಎಜುಕೇಷನಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಕೃಷ್ಣವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಸನಾತನ ಪರಂಪರೆಯಲ್ಲಿ ಹಿಂದು ಧರ್ಮಕ್ಕೆ ಮಹತ್ವವಿದೆ. ಯಾರು ಧರ್ಮವನ್ನು ರಕ್ಷಣೆ ಹಾಗೂ ಪಾಲನೆ ಮಾಡುತ್ತಾರೋ ಅವರನ್ನು ಧರ್ಮವೂ ರಕ್ಷಿಸುತ್ತದೆ ಎಂದರು.
ಹಬ್ಬಗಳು ಭಾರತೀಯರ ಜೀವನಾಡಿ. ಮಕ್ಕಳಿಗೆ ಕೇವಲ ಶಿಕ್ಷಣ ನೀಡದೆ ಸಂಸ್ಕಾರಯುತ, ಮೌಲ್ಯಗಳನ್ನು ಬೆಳೆಸಬೇಕು. ಒತ್ತಡದ ಬದುಕಿನಿಂದಾಗಿ ಉತ್ತಮ ಬಾಂಧವ್ಯ ಬೆಸೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಂದಗೋಕುಲ ವಿದ್ಯಾ ಸಂಸ್ಥೆ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಶಿಕ್ಷಣ ಜತೆಗೆ ಭದ್ರವಾದ ಸಂಸ್ಕಾರ ಬಿತ್ತುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯೆ ರಂಜಿನಿ ಮಾತನಾಡಿ, ಅತಿಯಾದ ಮೊಬೈಲ್ ವ್ಯಾಮೋಹಕ್ಕೆ ವಿದ್ಯಾರ್ಥಿಗಳು ಒಳಗಾಗುತ್ತಿದ್ದಾರೆ. ಇದರಿಂದ ಅವರ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ ಉಂಟಾಗುತ್ತಿದೆ. ಶಿಕ್ಷಕರ ಜತೆಗೆ ಪಾಲಕರು ಮಕ್ಕಳ ಬಗ್ಗೆ ಗಮನಹರಿಸಿದಾಗ ಮಾತ್ರ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಕೃಷ್ಣ ವೇಷಭೂಷಣ ಸ್ಪರ್ಧೆ ನಡೆಯಿತು. ದೀಪಕ್, ಸತೀಶ್, ಶಿಕ್ಷಕಿ ನಾಗು ಎಂ. ಪಾಟೀಲ್, ಮಲ್ಲಮ್ಮ, ಗೀತಾ, ಜಯಂತಿ, ಪ್ರಮೋದಿನಿ, ಲಲಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net