ವೆಂಕಟರಮಣ ದೇವರ ಉತ್ಸವ

hos pallakki
ನಗರ ಗುಜರಿಪೇಟೆ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಭಾಸ್ಕರ ಭಟ್, ಸುರೇಶ ಭಟ್, ಜಯಲಕ್ಷ್ಮೀ ರಾವ್, ಸುಧೀಂದ್ರ ಭಂಡಾರಕರ್ ಇದ್ದರು.
Published on

ಹೊಸನಗರ: ಇತಿಹಾಸ ಪ್ರಸಿದ್ಧ ನಗರ ಗುಜರಿಪೇಟೆ ಶ್ರೀ ವೆಂಕಟರಮಣ ಸ್ವಾಮಿಯ ದೀಪೋತ್ಸವ ಅಂಗವಾಗಿ ದೇವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಿತು.

ದೀಪೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಅರ್ಚನೆ, ಅಲಂಕಾರ, ಮಂಗಳಾರತಿ ಸೇವೆಗಳು ನಡೆದವು. ದೇವಸ್ಥಾನದಿಂದ ಛತ್ರಗದ್ದೆ ಕಟ್ಟೆವರೆಗೆ ದೇವರ ಪಲ್ಲಕ್ಕಿ ಉತ್ಸವ ಸಾಗಿತು. ಉತ್ಸವದ ವೇಳೆ ಜಯಘೋಷ, ರಾಜಬೀದಿಯಲ್ಲಿ ಹಣ್ಣುಕಾಯಿ ಸೇವೆ, ಮಹಿಳೆಯರಿಂದ ಭಜನೆ ಕಾರ್ಯಕ್ರಮ ಗಮನಸೆಳೆಯಿತು.

ದೇವಸ್ಥಾನ ಸಮಿತಿ ಪ್ರಮುಖರಾದ ನೂಲಿಗ್ಗೇರಿ ಭಾಸ್ಕರ್ ಭಟ್, ಈ ವರ್ಷವೂ ದೀಪೋತ್ಸವ ನಡೆಸಲಾಗುತ್ತಿದೆ. ಅರ್ಚಕ ತುಕಾರಾಂ ಭಟ್ ನೇತೃತ್ವದಲ್ಲಿ ದೇವರ ಪಲ್ಲಕ್ಕಿ ಉತ್ಸವ, ಪುರೋತ್ಸವ, ಕಾರ್ತಿಕ ದೀಪೋತ್ಸವ, ರಾತ್ರಿ ಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದರು.

ಉತ್ಸವದಲ್ಲಿ ಸುರೇಶ ಭಟ್, ಜಯಲಕ್ಷ್ಮೀ ಎಸ್. ರಾವ್, ಅನಂತಮೂರ್ತಿ ಶೆಣೈ, ವಿಠ್ಠಲ ಭಟ್, ಸಂಪೇಕಟ್ಟೆ ಶ್ರೀಕಾಂತ್, ಸುಧೀಂದ್ರ ಭಂಡಾರಕರ್, ನಾರಾಯಣ ಕಾಮತ್, ವೆಂಕಟೇಶ ಭಟ್, ರಾಘವೇಂದ್ರ ವಿ. ಕಿಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net