

ಸಾಗರ: ಸೊರಬ ರಸ್ತೆಯ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಅ.3ರಿಂದ 10ರವರೆಗೆ ನವರಾತ್ರಿ ಉತ್ಸವ ಏರ್ಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆ 7ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಬಿ.ರಘುನಾಥ್ ತಿಳಿಸಿದ್ದಾರೆ.
ಹೇಳಿಕೆ ನೀಡಿರುವ ಅವರು, ಪ್ರತಿದಿನ ರಾತ್ರಿ ಸಪ್ತಸತಿ ಪಾರಾಯಣ, ಅಷ್ಟಾವಧಾನ ಸೇವೆ, ಮಹಾಮಂಗಳರಾತಿ ಇರುತ್ತದೆ. 7ರಂದು ಲಲಿತಾ ಸಹಸ್ರನಾಮ ಪಾರಾಯಣ, 9ರಂದು ಶಾರದಾ ಪೂಜೆ, 11ರಂದು ದುರ್ಗಾಷ್ಟಮಿ ವಿಶೇಷ ಪೂಜೆ ಇರುತ್ತದೆ. 12ರಂದು ವಿಜಯ ದಶಮಿ ಅಂಗವಾಗಿ ಬನ್ನಿ ಮುಡಿಯುವುದು, ಪಲ್ಲಕ್ಕಿ ಉತ್ಸವ ಜರುಗಲಿದೆ ಎಂದು ಹೇಳಿದ್ದಾರೆ.