ರಸಗೊಬ್ಬರ ಗೋಲ್‍ಮಾಲ್ ಕೇಂದ್ರ ಸರ್ಕಾರದ ಎಚ್ಚರಿಕೆ

Untitled design
Published on

ನವದೆಹಲಿ: ಯೂರಿಯಾ ಮತ್ತು ಡಿಎಪಿಯಂತಹ ಸಬ್ಸಿಡಿಯುಕ್ತ ರಸಗೊಬ್ಬರಗಳನ್ನು ಮಾರಾಟ ಮಾಡುವಾಗ ಕೀಟನಾಶಕಗಳು, ಬಯೋ-ಸ್ಟಿಮ್ಯುಲಂಟ್, ನ್ಯಾನೋ ಆಧಾರಿತ ಬೆಳೆ ಪೋಷಕಾಂಶ ಮುಂತಾದ ಸಬ್ಸಿಡಿರಹಿತ ಉತ್ಪನ್ನಗಳನ್ನು ಬಲವಂತವಾಗಿ ಜೋಡಿಸಿ ರೈತರಿಗೆ ಮಾರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಸಗೊಬ್ಬರ ತಯಾರಕರು, ಮಾರಾಟಗಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಡಿಯ ರಸಗೊಬ್ಬರ ಇಲಾಖೆ ಜು. 21ರಂದು ಎಲ್ಲಾ ರಸಗೊಬ್ಬರ ಕಂಪನಿಗಳ ಉನ್ನತ ಅಧಿಕಾರಿಗಳಿಗೆ ಈ ಕುರಿತು ಪತ್ರ ಬರೆದಿದೆ.

ಮಾರುಕಟ್ಟೆಯಲ್ಲಿ ಈ ರೀತಿ ನಡೆಯುತ್ತಿದೆ ಎಂಬುದನ್ನು ಕೆಲವು ರೈತರು ಇಲಾಖೆಯ ಗಮನಕ್ಕೆ ತಂದಿದ್ದಾರೆ. ರಸಗೊಬ್ಬರಗಳು 1955ರ ಕಾಯ್ದೆಯಡಿ ಅಗತ್ಯ ವಸ್ತುಗಳಾಗಿದ್ದು, ಸಬ್ಸಿಡಿಯುಕ್ತ ರಸಗೊಬ್ಬರಗಳೊಂದಿಗೆ ಇತರ ಉತ್ಪನ್ನಗಳನ್ನು ಅನಧಿಕೃತವಾಗಿ ಜೋಡಿಸುವುದು ಈ ಕಾಯ್ದೆಯ ಉಲ್ಲಂಘನೆ. ಇದರಿಂದ ರೈತರ ಮೇಲೆ ಅನಗತ್ಯ ಆರ್ಥಿಕ ಹೊರೆ ಉಂಟಾಗುತ್ತದೆ. ಹೀಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net