VIDEO | 70 ವರ್ಷದ ನಿವೃತ್ತ ಶಿಕ್ಷಕನ ಮೇಲೆ ಮನಸೋಇಚ್ಛೆ ಲಾಠಿ ಬೀಸಿದ ಮಹಿಳಾ ಪೇದೆಗಳು!

Women Cops Bihar
Published on

ಬಿಹಾರ: 70 ವರ್ಷದ ನಿವೃತ್ತ ಶಿಕ್ಷಕರೊಬ್ಬರಿಗೆ ಇಬ್ಬರು ಮಹಿಳಾ ಪೇದೆಗಳು ಕೈಯ್ಯಲ್ಲಿದ್ ಲಾಠಿಯಲ್ಲಿ ಅಮಾನವೀಯವಾಗಿ ಹೊಡೆದಿರು ಘಟನೆ ಬಿಹಾರದಲ್ಲಿ ನಡೆದಿದೆ. ಮಹಿಳಾ ಪೇದೆಗಳಿಬ್ಬರ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ಪೇದೆಗಳಿಬ್ಬರ ನಡೆಯನ್ನು ಖಂಡಿಸುತ್ತಿದ್ದಾರೆ.

ಈ ವಿಡಿಯೋವನ್ನು ಮುಖೇಶ್ ಸಿಂಗ್ ಎಂಬ ಪತ್ರಕರ್ತರೊಬ್ಬರು ಟ್ವಿಟ್ ಮಾಡಿದ್ದಾರೆ. ನಗರದ ಪ್ರಮುಖ ರಸ್ತೆಯಲ್ಲೇ ಮಹಿಳಾ ಪೇದೆಗಳು ನಿವೃತ್ತ ಶಿಕ್ಷಕನಿಗೆ ಥಳಿಸಿದ್ದಾರೆ. ಆದರೆ ಅಲ್ಲೇ ಓಡಾಡಿಕೊಂಡಿದ್ದ ಯಾರೋಬ್ಬರೂ ಸಹಾಯಕ್ಕೆ ಬಾರದೆ, ಘಟನೆಯನ್ನು ನೋಡಿಕೊಂಡು ಮುಂದೆ ಸಾಗಿದ್ದಾರೆ. ನಿವೃತ್ತ ಶಿಕ್ಷಕ ಬೇಡಿಕೊಂಡರೂ, ಮಹಿಳಾ ಪೇದೆಗಳು ಮಾತ್ರ ಲಾಠಿಯಲ್ಲಿ ಹೊಡೆದಿದ್ದಾರೆ.

ವರದಿಯ ಪ್ರಕಾರ ನಿವೃತ್ತ ಶಿಕ್ಷಕ ಸೈಕಲ್​ನಲ್ಲಿ ತೆರಳುತ್ತಿದ್ದಾಳೆ. ಈ ವೇಳೆ ಆಯತಪ್ಪಿ ನಡುರಸ್ತೆಯಲ್ಲೇ ಬಿದ್ದಿದ್ದು, ಎದ್ದೇಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಇಬ್ಬರು ಮಹಿಳಾ ಪೇದೆಗಳು ಹೊಡೆದಿದ್ದಾರೆ ಎನ್ನಲಾಗಿದೆ.

ಮಹಿಳಾ ಪೇದೆಗಳನ್ನು ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಬಿಹಾರ ಪೊಲೀಸ್ ಮಹಾನಿರ್ದೇಶಕರಿಗೆ ಟ್ವಿಟರ್​ನಲ್ಲಿ ಒತ್ತಾಯಿಸಲಾಗುತ್ತಿದೆ. ಗೌರವಯುತ ಸ್ಥಾನದಲ್ಲಿರುವ ಒಬ್ಬ ಹಿರಿಯ ವ್ಯಕ್ತಿಯನ್ನು ಕಾರಣವಿಲ್ಲದೆ ಹೊಡೆದಿರುವುದು ತಪ್ಪು ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಘಟನೆಯ ಬಗ್ಗೆ ಮಹಿಳಾ ಪೇದೆಗಳ ಮೇಲೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net