

ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಜನಪ್ರಿಯ ನಟ ಚಿರಂಜೀವಿ ಅವರನ್ನು ಅಲ್ಲಿನ ಅಭಿಮಾನಿಗಳು ಸನ್ಮಾನಿಸಿದ್ದಾರೆ.
ಇತ್ತೀಚೆಗಷ್ಟೇ ಅವರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದು ತಿಳಿದ ಸಂಗತಿಯೇ. ಇದೇ ಹಿನ್ನೆಲೆಯಲ್ಲಿ ಲಾಸ್ ಏಂಜಲೀಸ್ ನಲ್ಲಿ ನಿರ್ಮಾಪಕ ಟಿ.ಜಿ.ವಿಶ್ವಪ್ರಸಾದ್ ಸನ್ಮಾನ ಸಭೆಯನ್ನು ಆಯೋಜಿಸಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ತಮ್ಮ ನೆಚ್ಚಿನ ನಾಯಕ ನಟನಿಗೆ ಜೈಕಾರ ಹಾಕಿದರು.
ನನಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದು ತುಂಬಾ ಖುಷಿ ತಂದಿದೆ. ಪ್ರಶಸ್ತಿ ಬಂದಾಗ ಖುಷಿಯಾಯಿತು, ಆ ಮನ್ನಣೆಯಿಂದ ನನ್ನ ಜೊತೆಗೆ ನೀವೆಲ್ಲರೂ ಖುಷಿಪಟ್ಟಿದ್ದೀರಿ, ಇದೊಂದು ದೊಡ್ಡ ಪ್ರಶಸ್ತಿ ಎಂದು ಚಿರಂಜೀವಿ ಹೇಳಿದರು.
ಇದಕ್ಕೆ ಸಂಬಂಧಿಸಿದ ದೃಶ್ಯಗಳು ವೈರಲ್ ಆಗಿವೆ. ಈ ಹಿಂದೆ ತೆಲಂಗಾಣ ರಾಜ್ಯ ಸರ್ಕಾರ ಅವರ ಜೊತೆಗೆ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ತೆಲುಗು ಜನರನ್ನು ಸನ್ಮಾನಿಸಿತ್ತು.
ಕೆಲವು ದಿನಗಳ ಹಿಂದೆ ಚಿರಂಜೀವಿ ಅಮೆರಿಕಕ್ಕೆ ಹೋಗಿದ್ದರು. ‘ವಿಶ್ವಂಭರ’ ಚಿತ್ರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದು, ಆಹ್ವಾನಿತ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲಿಂದ ಬಂದ ನಂತರ ವಿಶ್ವಂಭರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. 'ಬಿಂಬಿಸಾರ' ವಶಿಷ್ಠ ನಿರ್ದೇಶನದ ಸೋಶಿಯೋ ಫ್ಯಾಂಟಸಿ ಚಿತ್ರ ವಿಶ್ವಂಭರವಾಗಿದೆ. ತ್ರಿಷಾ ನಾಯಕಿಯಾಗಿದ್ದು, ಮುಂದಿನ ವರ್ಷ ಸಂಕ್ರಾಂತಿ ಸಮಯಕ್ಕೆ ಅಂದರೆ 2925ರ ಜನವರಿ 10 ರಂದು ಬಿಡುಗಡೆಯಾಗಲಿದೆ.