4 ದಿನದ ಹಿಂದೆ ಮದ್ವೆ, ಇಂದು ಅಂತ್ಯಸಂಸ್ಕಾರ! ಪರೀಕ್ಷೆ ಬರೆಯಲು ಹೋದವಳು ವಾಪಸ್​ ಶವವಾಗಿ ಬಂದಳು

Untitled design - 2025-08-09T133907.770
Published on

ಮೈಗಚ್ಚಿದ ಅರಿಶಿಣ ಆರಲಿಲ್ಲ.. ಕೈಗಂಟಿದ ಮೆಹಂದಿ ಹೋಗಿಲ್ಲ.. ಹಾಕಿದ ಚಪ್ಪರ ತೆಗೆದಿಲ್ಲ.. ಬಂಧು ಬಳಗದರು ಇನ್ನು ಮನೆ ಸೇರಿಲ್ಲ.. ಅಷ್ಟರಲ್ಲೇ ನಡೆದೋಯ್ತು ಘೋರ ದುರಂತ.. ಹೌದು, ಪಿಜಿ ಪ್ರವೇಶ ಪರೀಕ್ಷೆ ಬರೆಯಲು ತೆರಳಿದ್ದ ನವ-ವಿವಾಹಿತರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಧು ಮೃತಪಟ್ಟಿರುವ ಘಟನೆ ತೆಲಂಗಾಣ ಕರೀಂನಗರ ಜಿಲ್ಲೆಯ ತಿಮ್ಮಾಪುರದಲ್ಲಿ ಶುಕ್ರವಾರ ನಡೆದಿದೆ.

ಜಿಲ್ಲೆಯ ಚೊಪ್ಪದಂಡಿ ಮಂಡಲದ ರುಕ್ಮಾಪುರ ಗ್ರಾಮದ ಮುದ್ದಸಾನಿ ಅಖಿಲಾ (22) ಮೃತೆ ಎಂದು ಗುರುತಿಸಲಾಗಿದೆ.

ಅಖಿಲಾ ಅವರು ಜಗ್ತಿಯಾಲ್ ಜಿಲ್ಲೆಯ ಗೊಲ್ಲಪಲ್ಲಿ ಮಂಡಲದ ಲೋತುನೂರು ಗ್ರಾಮದ ಚಿರುತ ರಾಜು ಅವರನ್ನು ಇದೇ ಆ.6 ರಂದು ವಿವಾಹವಾದರು.( 4 ದಿನ ಹಿಂದೆ) ಶುಕ್ರವಾರ ಅಖಿಲಾ ತನ್ನ ಪತಿ ರಾಜು ಅವರೊಂದಿಗೆ ಪಿಜಿ ಪ್ರವೇಶ ಪರೀಕ್ಷೆ ಬರೆಯಲು ತಿಮ್ಮಾಪುರ ಮಂಡಲ ಕೇಂದ್ರದ ಎಂಜಿನಿಯರಿಂಗ್ ಕಾಲೇಜಿಗೆ ಹೋಗಿದ್ದರು. ಪರೀಕ್ಷೆ ಬರೆದು ಬೈಕ್‌ನಲ್ಲಿ ಒಟ್ಟಿಗೆ ಹಿಂತಿರುಗುತ್ತಿದ್ದಾಗ, ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಖಿಲಾ ಸ್ಥಳದಲ್ಲೇ ಸಾವನ್ನಪ್ಪಿದರು. ರಾಜು ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಾರಿ ಚಾಲನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net