ಬಿಇ, ಆರ್ಕಿಟೆಕ್ ಕೋರ್ಸ್‌ಗಳ ಶುಲ್ಕ ಶೇ.7.5ರಷ್ಟು ಹೆಚ್ಚಳ

CET Results
Published on

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಖಾಸಗಿ ಅನುದಾನ ರಹಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿನ ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳ ಶುಲ್ಕವನ್ನು ಶೇ.7.5ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ.

ಕರ್ನಾಟಕ ಅನುದಾನರಹಿತ ಶಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ (ಕೆಯುಪಿಇಸಿಎ) ಮತ್ತು ಇತರ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೇರಿ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ನಡೆದ ಶುಲ್ಕ ನಿಗದಿ ಅಭೆಯಲ್ಲಿ ಶುಲ್ಕ ಹೆಚ್ಚಿಸಲು ನಿರ್ಧರಿಸಲಾಗಿದೆ.

ಖಾಸಗಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಒಕ್ಕೂಟವು ಶೇ.110ರಿಂದ 15ರಷ್ಟು ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಯನ್ನು ಒಪ್ಪದ ಸಚಿವರು ಶೇ.7ರಷ್ಟು ಹೆಚ್ಚಳ ಮಾಡಬಹುದಷ್ಟೇ ಎಂದು ಪ್ರತಿಕ್ರಿಯಿಸಿದರು.

ಸಂಘದ ಪ್ರತಿನಿಧಿಗಳು ಮೂಲಸೌಕರ್ಯ ಸುಧಾರಣಾ ವೆಚ್ಚ ನಿರ್ವಹಣೆ ಮತ್ತು ಗುಣಮಟ್ಟವನ್ನು ಪರಿಗಣಿಸಬೆಕಾಗಿದೆ ಎಂದು ಶುಲ್ಕ ಹೆಚ್ಚಳಕ್ಕೆ ಸಚಿವರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಸಚಿವರು ಒತ್ತಾಯಕ್ಕೆ ಮಣಿಯದೆ ಶೇ.7.5 ಹೆಚ್ಚಳ ಮಾಡಲು ಮಾತ್ರ ಒಮ್ಮತಕ್ಕೆ ಬಂದರು ಎಂದು ತಿಳಿಸಲಾಗಿದೆ.

ಸಬೆ ಬಳಿಕ ಮಾತನಾಡಿದ ಸಚಿವ ಡಾ. ಎಂ.ಸಿ. ಸುಧಾಕರ್, ಕಲೆದ ವರ್ಷವೂ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿತ್ತು. ಈ ಬಾರಿಯೂ ಶೇ.10 ಹೆಚ್ಚಳ ಮಾಡಿದರೆ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಹೀಗಾಗಿ, ಶೇ.7.5ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಲಾಗಿದೆ ಎಂದರು.

ಶೇ.7.5 ಶುಲ್ಕದ ಜತೆಗೆ ವಿಶ್ವವಿದ್ಯಾಲಯದ ನೋಂದಣಿ ಮತ್ತು ಇತರೆ ಸಂಸ್ಕರಣಾ ಶುಲ್ಕವಿಲ್ಲದೆ ಟೈಪ್-1 ಖಾಸಗಿ ಕಾಲೇಜುಗಳಲ್ಲಿ ಸಿಇಟಿ ಸೀಟುಗಳಿಗೆ (ಸರ್ಕಾರಿ ಕೋಟಾ) ಶುಲ್ಕವು 1,14,199 ರೂ. ಆಗಿರುತ್ತದೆ. ಕಾಮೆಡ್ ಕೆ ಟೈಪ್-1 ಕಾಲೇಜುಗಳಲ್ಲಿ ಶುಲ್ಕವು 2,00,070 ರೂ. ಮತ್ತು ಟೈಪ್-2 ಕಾಲೇಜುಗಳಲ್ಲಿ 2,81,088 ರೂ.ಗಳಾಗಿರುತ್ತವೆ. ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಮಗ್ ಕಾಲೇಜುಗಳ ಶುಲ್ಕವು ಕಳೆದ ವರ್ಷದಂತೆಯೇ ಇರಲಿದೆ. 2024-25ನೇ ಸಾಲಿನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೊಟಾದ ಸೀಟುಗಳಿಗೆ 1,06,231 ರೂ. ಶುಲ್ಕ ನಿಗದಿ ಮಾಡಲಾಗಿತ್ತು. ಕಾಮೆಡ್ ಕೆ ಟೈಪ್-1 ಕಾಲೇಜುಗಳಲ್ಲಿ 1,86,111 ರೂ. ಮತ್ತು ಟೈಪ್-2 ಕಾಲೇಜುಗಳಿಗೆ 2,31,477 ರೂ. ಶುಲ್ಕವಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net