ದಕ್ಷಿಣ ಮುಂಬೈನಲ್ಲಿ ಅಸುರಕ್ಷಿತ ಭಾವನೆ : ನಟಿ ಸಮೋನಾ ಚಕ್ರವರ್ತಿ| Actor

untitled-design-2025-09-01t155151404-68b573c6c2572 (1)
Published on

Actor: ಮರಾಠ ಪ್ರತಿಭಟನೆಯಿಂದಾಗಿ ದಕ್ಷಿಣ ಮುಂಬೈನಲ್ಲಿ ಎದುರಿಸಿದ ಭಯಾನಕ ಅನುಭವದ ಬಗ್ಗೆ ಹಿಂದಿ ಟೆಲಿವಿಷನ್​ ನಟಿ ಸಮೋನಾ ಚಕ್ರವರ್ತಿ ಭಾನುವಾರ ತಮ್ಮ ಇನ್​ಸ್ಟಾಗ್ರಾಮ್​ ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಈಗ ಆ ಪೋಸ್ಟ್​ನ್ನು ಅಳಿಸಿ ಹಾಕಿರುವ ವಿಷಯ ಭಾರೀ ಚರ್ಚೆಯಾಗಿದೆ.

ಪ್ರತಿಭಟನಾಕಾರರು ಆಕೆಯ ಕಾರನ್ನು ತಡೆದು ಕಿಟಕಿಯನ್ನು ಬಡಿಯುತ್ತಾ "ಜೈ ಮಹಾರಾಷ್ಟ್ರ" ಎಂದು ಕೂಗುತ್ತಿರುವುದರ ಬಗ್ಗೆ ಸಮೋನಾ ಪೋಸ್ಟ್​ ಹಂಚಿಕೊಂಡಿದ್ದರು. ಈಗ ಅಳಿಸಲಾದ ಪೋಸ್ಟ್​ನಲ್ಲಿ ನಟಿ ಇಂದು ಮಧ್ಯಾಹ್ನ 12:30 ಗೆ ನಾನು ಕೊಲಬಾದಿಂದ ಕೋಟೆಗೆ ಚಾಲನೆ ಮಾಡುತ್ತಿದ್ದ ಸಮಯದಲ್ಲಿ ಇದ್ದಕ್ಕಿಂದತೆ ನನ್ನ ಕಾರನ್ನು ಗುಂಪೊಂದು ತಡೆಯಿತು.

ಒಬ್ಬ ವ್ಯಕ್ತಿ ನನ್ನ ಕಾರಿಗೆ ತನ್ನ ಹೊಟ್ಟೆಯನ್ನು ಚಾಚಿಕೊಂಡು ನಿಂತು ಕಾರಿನ ಬ್ಯಾನೆಟ್​ನ್ನು ಬಡಿದನು. ಇನ್ನು ಆತನ ಸ್ನೇಹಿತರು ಕಿಟಕಿಯನ್ನು ಬಡಿಯುತ್ತಾ, ಜೈ ಮಹಾರಾಷ್ಟ್ರ ಎಂದು ಕೂಗುತ್ತಾ ನಗುತ್ತಿದ್ದರು. ನಾವು ಹಾಗೇ ಸ್ವಲ್ಪ ಮುಂದೆ ಹೋಗಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದೆವು.

ಈ ಪ್ರತಿಭಟನೆ ವೇಳೆ ಪೊಲೀಸರು ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಇಲ್ಲಿನ ಕಾನೂನು ಸುವ್ಯವಸ್ಥೆ ಸರಿ ಇಲ್ಲ. ನಾನು ಹಗಲಿನಲ್ಲಿ ಕಾರಿನಲ್ಲಿ ಕೂತು ಅಸುರಕ್ಷಿತ ಭಾವನೆಯನ್ನು ಅನುಭವಿಸಿದ್ದೇನೆ. ಹಾಗೆಯೇ ಬೀದಿಗಳಲ್ಲಿ ಬಾಳೆಹಣ್ಣಿನ ಸಿಪ್ಪೆಗಳು, ಪ್ಲಾಸ್ಟಿಕ್​ ಬಾಟಲಿಗಳು, ಹೊಲಸುಗಳಿಂದ ತುಂಬಿವೆ.

ಪ್ರತಿಭಟನಕಾರರು ಆ ಪ್ರದೇಶದಲ್ಲಿಯೇ ತಿನ್ನುತ್ತಿದ್ದಾರೆ, ಸ್ನಾನ ಮಾಡುತ್ತಿದ್ದಾರೆ, ಅಡುಗೆ ಮಾಡುತ್ತಿದ್ದಾರೆ, ವಿಡಿಯೋ ಕರೆ ಮಾಡುತ್ತಿದ್ದಾರೆ. ಇನ್ನು ಪ್ರತಿಭಟನೆಯ ಹೆಸರಿನಲ್ಲಿ ಮುಂಬೈ ದರ್ಶನ ಮಾಡುತ್ತಿದ್ದಾರೆ ಎಂದು ನಟಿ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಳೆದು ಸುಮಾರು ವರ್ಷಗಳಿಂದ ಮುಂಬೈ ನಗರದಲ್ಲಿ ವಾಸಿಸುತ್ತಿದ್ದೇನೆ. ಎಂದಿಗೂ ಅಸುರಕ್ಷಿತ ಭಾವನೆ ಅನುಭವಿಸಿಲ್ಲ. ಆದರೆ, ಇದೇ ಮೊದಲ ಬಾರಿಗೆ ಹಗಲು ಹೊತ್ತಿನಲ್ಲೇ ಅಸುರಕ್ಷಿತನೆಂದು ಭಾವಿಸಿದೆ ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net