ಚಿತ್ರ ವಿ- ಚಿತ್ರ: ತಂದೆಯ ನೆನಪು ತಂದ ಇಮೇಲ್

sudina- 1
Published on

ನವದೆಹಲಿ: ಸಾವು ಎಂಬುದು ಎಲ್ಲರಿಗೂ ನೋವನ್ನುಂಟುಮಾಡುವಂಥದ್ದು. ಆದರೆ ಯಾರಿಗೂ ಅದು ತಪ್ಪಿದ್ದಲ್ಲ. ಇತ್ತೀಚೆಗೆ ತನ್ನ ತಂದೆ ಕಳುಹಿಸಿದ ಇಮೇಲ್ ಸ್ವೀಕರಿಸಿದ ಆಲಿ ಮೆಂಡೋಸಾ ಎಂಬ ಯುವತಿಯೊಬ್ಬಳು ತುಂಬ ಭಾವುಕರಾಗಿಬಿಟ್ಟರು. ಏಕೆಂದರೆ ತಂದೆ ತೀರಿಕೊಂಡ ಹತ್ತು ತಿಂಗಳ ನಂತರ ಈ ಇಮೇಲ್ ಆಕೆಗೆ ತಲುಪಿತ್ತು. ತನ್ನ ಮದುವೆಯ ಇಪ್ಪತೆôದನೇ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸುವುದು ಹೇಗೆಂಬ ವಿವರಗಳನ್ನು ಇಮೇಲ್​ನಲ್ಲಿ ಬರೆದಿದ್ದ ತಂದೆ, ಅದು ಹತ್ತು ತಿಂಗಳ ನಂತರವೇ ಮಗಳಿಗೆ ತಲುಪುವಂತೆ ನಿಗದಿ ಮಾಡಿಟ್ಟಿದ್ದರು. ಈಗ ಆ ಇಮೇಲ್ ಸ್ವೀಕರಿಸಿರುವ ಮಗಳು ತಂದೆಯ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net