FATHER'S DAY SPECIAL | ಜೈಲುವಾಸ ಅನುಭವಿಸಿದ ರಾಷ್ಟ್ರಪ್ರೇಮಿ ನನ್ನ ಅಪ್ಪ…

Biranna Naik Mogata
Published on

ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.

ಸಾಮಾನ್ಯವಾಗಿ ಮಕ್ಕಳಿಗೆ ಅಮ್ಮನೆಂದರೆ ಇಷ್ಟ. ಹೆಣ್ಣು ಮಕ್ಕಳು ಅಪ್ಪನನ್ನು ಪ್ರೀತಿಸಿದರೆ, ಗಂಡು ಮಕ್ಕಳು ಅಮ್ಮನನ್ನು ಪ್ರೀತಿಸುವುದನ್ನು ನೋಡುತ್ತೇವೆ. ಆದರೆ, ನನ್ನ ಬದುಕಿನಲ್ಲಿ ಎಲ್ಲವೂ ಅಪ್ಪನೆ ಆಗಿದ್ದ. ಅಪ್ಪನೇ ನನ್ನ ಜೀವನದಲ್ಲಿ ನನಗೆ ದೊಡ್ಡ ರೋಲ್ ಮಾಡೆಲ್. ಸ್ವಾತಂತ್ರ್ಯಯೋಧರಾದ ನನ್ನಪ್ಪ ಸ್ವಾತಂತ್ರ್ಯಹೋರಾಟದಲ್ಲಿ ಜೈಲುವಾಸ ಅನುಭವಿಸಿದ ಅಪ್ಪಟ ರಾಷ್ಟ್ರಪ್ರೇಮಿಯಾಗಿದ್ದರು. ನನ್ನಪ್ಪ ಮಕ್ಕಳಿಗೆ ಪ್ರೀತಿಯ ಅಪ್ಪನಾಗಿ, ದಾರಿತೋರಿಸುವ ಮಾರ್ಗದರ್ಶಕನಾಗಿ, ನಮ್ಮ ಭವಿಷ್ಯದ ಬಗ್ಗೆ ಚಿಂತಿ ಸುವ ಚಿಂತಕನಾಗಿ, ಸಮಸ್ಯೆಯನ್ನು ಎದದುರಿಸುವ ತಂತ್ರಗಾರಿಕೆಯನ್ನು ನನಗೆ ಎರಕ ಹೊಯ್ದವ. ಸಾಮಾನ್ಯ ರೈತ ಕುಟುಂಬದಲ್ಲಿ ಬೆಳದ ನನಗೆ ನನ್ನಪ್ಪ ಮೀನು ತಂದು ಕೊಡಲಿಲ್ಲ. ಬದಲಾಗಿ ಮೀನನ್ನೆ ಹಿಡಿಯಲು ಕಲಿಸಿದ. ಅಪ್ಪ ದೈಹಿಕವಾಗಿ ನನ್ನ ಜೊತೆ ಇಲ್ಲದೆ ಇದ್ದರೂ ಇರುವಿಕೆಯ ಅನುಭವ ನೀಡುತ್ತಲೆ ಇರುತ್ತಾನೆ.

| ಬೀರಣ್ಣ ನಾಯಕ ಮೊಗಟಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net