ನಿದ್ದೆ ಬಂದಿಲ್ಲ ಎಂದು ಅಳುತ್ತಿದ್ದ ಮಗಳಿಗೆ ಸಿಗರೇಟಿನಿಂದ ಸುಟ್ಟು ಶಿಕ್ಷೆ ನೀಡಿದ ತಂದೆ! Daughter

Daughter
Published on

Daughter: ಮಧ್ಯಾಹ್ನ ನಿದ್ದೆ ಬಾರದೆ ಅಳುತ್ತಿದ್ದ ತನ್ನ 5 ವರ್ಷದ ಮಗಳಿಗೆ ತಂದೆಯೊಬ್ಬ, ಆಕೆಯ ಕಾಲುಗಳನ್ನು ಕಟ್ಟಿ, ಸಿಗರೇಟಿನಿಂದ ಸುಟ್ಟಿದ ಘಟನೆ ಮುಂಬೈನಲ್ಲಿ ನಡೆದಿದೆ.

ಈ ನೋವಿನಿಂದ ಬಾಲಕಿ ನೋವು ತಡೆಯಲಾರದೆ ಜೋರಾಗಿ ಅತ್ತಾಗ, ಆ ಶಬ್ದ ಕೇಳಿ ನೆರೆಹೊರೆಯವರು ವಿಡಿಯೋ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನೆರೆಹೊರೆಯವರಲ್ಲಿ ಒಬ್ಬರು ಮಗುವಿಗೆ ನೀಡಿದ ದೈಹಿಕ ಕಿರುಕುಳದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ನಂತರ ಆ ತಂದೆ ತಮ್ಮ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುತ್ತಿದ್ದಾಗ ಅವರನ್ನು ಗುರುತಿಸಿ ನಂತರ, ಅವರು ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಘಟನೆಯನ್ನು ವರದಿ ಆ ನೆರೆಹೊರೆಯವರು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರಿನ ಮೇರೆಗೆ ಮಂಖುರ್ಡ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕಿಯ ಮನೆಗೆ ತಲುಪಿದಾಗ ಆಕೆ ಮತ್ತು ಆಕೆಯ ಸಹೋದರ ಇರುವುದನ್ನು ನೋಡಿದ್ದಾರೆ ಆದರೆ, ಆರೋಪಿ ಮನೆಯಲ್ಲಿ ಇರಲಿಲ್ಲ. ಪೊಲೀಸರು ವಿಚಾರಿಸಿದಾಗ, ಬಾಲಕಿ ಭಾನುವಾರ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದರಿಂದ ಆಕೆಯ ತಂದೆ ಆಕೆಯ ಮೇಲೆ ಕಪಾಳಕ್ಕೆ ಹೊಡೆದು, ಮೈಮೇಲೆ ಸಿಗರೇಟಿನಿಂದ ಸುಟ್ಟಿದ್ದಾನೆ. ಬಾಲಕಿಯ ಕೈ ಮತ್ತು ಕುತ್ತಿಗೆಯಲ್ಲಿ ಸುಟ್ಟ ಗಾಯಗಳನ್ನು ನೋಡಿದ ಪೊಲೀಸರು, ತಂದೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಆರೋಪಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿ ಅದೇ ಸಂಜೆ ಆತನನ್ನು ಬಂಧಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net