ಅಳಿಯನ ಜತೆ ತಾಯಿಯ ಸರಸ: ಮಗುವಿಗೆ ಜನ್ಮವಿತ್ತ ಖುಷಿಯಲ್ಲಿ ಮನೆಗೆ ಬಂದವಳಿಗೆ ಕಾದಿತ್ತು ಆಘಾತ!

Ran away
Published on

ಲಂಡನ್​: ಎರಡು ಮಕ್ಕಳ ತಂದೆಯೊಬ್ಬ ಪತ್ನಿಯ ತಾಯಿಯೊಂದಿಗೆ ಓಡಿ ಹೋಗಿರುವ ಘಟನೆ ಇಂಗ್ಲೆಂಡ್​ ಗ್ಲೌಸೆಸ್ಟರ್‌ಶೈರ್​ನಲ್ಲಿ ನಡೆದಿದೆ. ಅಚ್ಚರಿಯೆಂದರೇ ತನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಇಬ್ಬರು ಪರಾರಿಯಾಗಿದ್ದಾರೆ. ​

ಜೆಸ್ಸ್​ ಅಲ್ಡ್ರಿಡ್ಜ್​ (24) ಹಾಗೂ ಆಕೆಯ ಪತಿ ರಯಾನ್​ ಶೆಲ್ಟನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವಾಗ ಪೋಷಣೆಗೆಂದು ಗ್ಲೌಸೆಸ್ಟರ್‌ಶೈರ್​ನಲ್ಲಿರುವ ತಾಯಿ ಮನೆಗೆ ತೆರಳಿದ್ದಳು. ಜೆಸ್ಸ್​ ತಾಯಿ ಜಾರ್ಜಿನಾ (44) ಮತ್ತು ತಂದೆ ಎರಿಕ್ ಅಳಿಯ-ಮಗಳನ್ನು ಆತ್ಮೀಯವಾಗೇ ಬರಮಾಡಿಕೊಂಡಿದ್ದರು.

ಮನೆಗೆ ಬಂದ ಕೆಲವು ದಿನಗಳ ಬಳಿಕ ಜಾರ್ಜಿನಾ, ಅಳಿಯ ರಯಾನ್​ ಜತೆ ಸಲುಗೆ ಬೆಳೆಸಲು ಆರಂಭಿಸಿದಳು. ಜೆಸ್ಸ್​ ತುಂಬು ಗರ್ಭಿಣಿ ಆಗುವಷ್ಟರಲ್ಲಿ ರಯಾನ್​ ಮತ್ತು ಜಾರ್ಜಿನಾ ನಡುವೆ ವಿವಾಹೇತರ ಸಂಬಂಧವೇ ಬೆಳೆದಿತ್ತು. ಇದಾದ ಬಳಿಕ ಹೆರಿಗೆ ನೋವಿನಿಂದ ಜೆಸ್ಸ್​ ಆಸ್ಪತ್ರೆಗೆ ದಾಖಲಾಗಿದ್ದಳು. ಜನವರಿ 28ರಂದು ಗಂಡು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿ ಮನೆಗೆ ಬಂದ ಜೆಸ್ಸ್​ಗೆ ಆಘಾತ ಎದುರಾಗಿತ್ತು. ಏಕೆಂದರೆ, ತನ್ನ ತಾಯಿ ಜತೆಯಲ್ಲಿ ಪತಿ​ ಓಡಿ ಹೋಗಿದ್ದ.

ಈ ಬಗ್ಗೆ ಮಾತನಾಡಿರುವ ಜೆಸ್ಸ್​, ಇದು ಸಂಪೂರ್ಣ ನಂಬಿಕೆ ದ್ರೋಹವಾಗಿದೆ. ಅಜ್ಜಿಯಾದವಳು ಮಗುವನ್ನು ಪ್ರೀತಿಸುತ್ತಾರೆ ಎಂದು ನಿರೀಕ್ಷಿಸುತ್ತೀರಿ, ಆದರೆ, ತಂದೆಯನ್ನಲ್ಲ. ಹೊಸದಾಗಿ ಹುಟ್ಟಿದ ಮಗವಿನ ಮೇಲೆ ಪ್ರೀತಿ ಇರಬೇಕೋ ಹೊರತು ಮಗುವಿನ ತಂದೆಯ ಮೇಲೆ ಮೋಹ ಇರಬಾರದು. ನನ್ನ ಮಕ್ಕಳನ್ನು ನೋಡಿಕೊಳ್ಳಲು ತಾಯಿ ಬೆಂಬಲವಾಗಿ ನಿಲ್ಲುತ್ತಾರೆಂದು ಭಾವಿಸಿದ್ದೆ. ಆದರೆ, ಹೀಗಾಗುತ್ತದೆ ಎಂದು ಭಾವಿಸಿರಲಿಲ್ಲ. ನಿಜಕ್ಕೂ ಇದು ನಂಬಿಕೆ ದ್ರೋಹ ಎಂದು ಜೆಸ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಮಕ್ಕಳ ಪಾಲನೆಗೆಂದು ತಾಯಿ ಮನೆಗೆ ಬರುವ ಯೋಚನೆಯಲ್ಲಿದ್ದ ಜೆಸ್ಸ್​, ಇದೀಗ ಚೈಲ್ಡ್​ಕೇರ್​ ನೆರವಿನಿಂದ ಮಕ್ಕಳ ಪಾಲನೆಯತ್ತ ಗಮನಹರಿಸಲಿದ್ದಾರೆ. ಇನ್ನು ತಾಯಿ ಮತ್ತು ಪತಿ ಇಬ್ಬರು ಸಲುಗೆಯಿಂದ ಇರುವುದನ್ನು ಜೆಸ್ಸ್​ ಮೊದಲೇ ಗಮನಿಸಿದ್ದರಂತೆ. ಪ್ರತಿದಿನ ರಾತ್ರಿ ಅಡುಗೆ ಮನೆಯಲ್ಲಿ ಕುಳಿತ ಮದ್ಯಪಾನ ಮಾಡುತ್ತಾ ಹರಟೆ ಹೊಡೆಯುತ್ತಿದ್ದರಂತೆ. ಮಧ್ಯ ಪ್ರವೇಶಿಸಿದಾಗಲೆಲ್ಲ ಏನು ಇಲ್ಲ ಹಾಗೇ ಸುಮ್ಮನೆ ಮಾತನಾಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದರಂತೆ. ಆ ಸಮಯದಲ್ಲಿ ನಿಜವೆಂದು ನಾನು ಸಹ ನಂಬಿದ್ದೆ ಎನ್ನುತ್ತಾರೆ ಜೆಸ್ಸ್​. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net