ಸೆಲ್ಫಿ ವಿಡಿಯೋ ಮಾಡಿ ಮಗಳನ್ನೂ ಕೊಂದ ತಂದೆ ಆತ್ಮಹತ್ಯೆ

suicide
Published on

ರಾಮನಗರ: ಜೀವನದಲ್ಲಿ ಜಿಗುಪ್ಸೆಗೊಂಡ ವಿವಾಹಿತನೊಬ್ಬ ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ಮಗಳಿಗೂ ನೇಣುಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಮನಗರ ನಿವಾಸಿ ರಾಮಚಂದ್ರ (38) ಮತ್ತು ಇವರ ಪುತ್ರಿ ವರ್ಷಾ ಮೃತರು. ಮಗಳ ಜತೆ ಮಂಗಳವಾರ ತಡ ರಾತ್ರಿ ಕಟಮಾನದೊಡ್ಡಿ ಗ್ರಾಮಕ್ಕೆ ಬಂದ ಈತ ನೇಣಿಗೆ ಶರಣಾಗಿದ್ದಾನೆ. ಬುಧವಾರ ಬೆಳಗ್ಗೆ ತಂದೆ ಮತ್ತು ಮಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆ ರಾಮಚಂದ್ರನ ಪತ್ನಿ ತಲೆಮರೆಸಿಕೊಂಡಿದ್ದಾಳೆ.

ಪತ್ನಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಅನುಮಾನಗೊಂಡ ರಾಮಚಂದ್ರ, ಮನನೊಂದು ಸಾವಿನ ದಾರಿ ಹಿಡಿದಿದ್ದಾನೆ. ತನ್ನ ಜತೆಗೆ ಆಟವಾಡಿಕೊಂಡಿರಬೇಕಾದ ಪುಟ್ಟ ಮಗಳನ್ನೂ ಸಾವಿನ ಕೂಪಕ್ಕೆ ತಳ್ಳಿದ್ದಾನೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಮನಗರ ಗ್ರಾಮಾಂತರ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net