ತಂದೆಯಾದ ಖುಷಿಯಲ್ಲಿಯೇ ಹೆರಿಗೆ ಆಸ್ಪತ್ರೆ ಎದುರೇ ಪ್ರಾಣ ಬಿಟ್ಟ..Mysore

father
Published on

ಮೈಸೂರು: ( Mysore ) ತಂದೆಯಾದ ಸಂತೋಷದಲ್ಲಿಯೇ ಇದ್ದ ವ್ಯಕ್ತಿ ಮಗು ಹುಟ್ಟಿದ ಮರುದಿನವೇ ಆಸ್ಪತ್ರೆಯ ಎದುರು ನಿಧನರಾಗಿದ್ದಾರೆ. ಮೈಸೂರಿನಲ್ಲಿ ಒಂದು ದುರಂತ ಘಟನೆ ನಡೆದಿದೆ.

ನಾಗೇಶ್ (47) ಮೃತ ದುರ್ದೈವಿ . ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ನಿವಾಸಿ ನಾಗೇಶ್​​ ಹೆರಿಗೆಗೆ ಅಂತ ಪತ್ನಿಯನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು.

ನಾಗೇಶ್​ ಪತ್ನಿಯ ಆರೈಕೆಗಾಗಿ ಕಳೆದ ಐದಾರು ದಿನಗಳಿಂದ ಆಸ್ಪತ್ರೆಯಲ್ಲಿ ತಂಗಿದ್ದರು. ನಾಗೇಶ್​ ಪ್ರತಿದಿನ ಆಸ್ಪತ್ರೆಯ ಆವರಣದಲ್ಲಿ ಮಲಗುತ್ತಿದ್ದರು.

ಬೆಳಗ್ಗೆ 7 ಗಂಟೆ ಸುಮಾರಿಗೆ ನೋಡಿದಾಗ ನಾಗೇಶ್​​​ ಮೃತಪಟ್ಟಿರುವುದು ತಿಳಿದಿದೆ. ಮಗು ಜನಿಸಿದ ಮರುದಿವೇ .... ತಂದೆಯಾದ ಖುಷಿಯಲ್ಲಿಯೇ ನಾಗೇಶ್ ಬಾರದ ಲೋಕಕ್ಕೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net