ಪತ್ನಿ ಸತ್ತ 3 ತಿಂಗಳಿಗೆ ಮತ್ತೊಂದು ಮದ್ವೆ ಆದವ ಮಗುವಿನ ಜತೆ ಸಾವಿನ ಮನೆಯ ಕದ ತಟ್ಟಿದ್ದೇಕೆ?

death
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕು ಬ್ರಾಹ್ಮರಣಹಳ್ಳಿಯಲ್ಲಿ ತನ್ನ 9 ತಿಂಗಳ ಹೆಣ್ಣುಮಗು ಮತ್ವಿತು ತಂದೆಯ ಶವ ಕೃಷಿಹೊಂಡದಲ್ಲಿ ಪತ್ತೆಯಾಗಿದೆ.

ರವಿ(35) ಹಾಗೂ ಇವರ ಮಗು ಸುಷ್ಮಾ(9 ತಿಂಗಳು) ಮೃತ ದುರ್ದೈವಿಗಳು. ರವಿಯ ಮೊದಲ ಮೊದಲ ಪತ್ನಿ ಶಶಿಕಲಾ ಮೂರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದಳು. 15 ದಿನಗಳ ಹಿಂದೆ ಆಂಧ್ರಪ್ರದೇಶ ಮೂಲದ ಯುವತಿ ಜತೆ ರವಿಗೆ ಎರಡನೇ ಮದುವೆಯಾಗಿತ್ತು.

ಬ್ರಾಹ್ಮರಣಹಳ್ಳಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ರವಿ, ಪತ್ನಿ ನಿಧನದ ಬಳಿಕ ಎರಡನೇ ಮದುವೆ ಆಗಿದ್ದ. ಆದ್ರೆ ಅದೇನಾಯ್ತೋ ಏನೋ ಗೊತ್ತಿಲ್ಲ. ನಿನ್ನೆ ರಾತ್ರಿಯಿಂದ ನಾಪತ್ತೆಯಾಗಿದ್ದ ರವಿ ಹಾಗೂ ಮಗು ಇಂದು ಬೆಳಗ್ಗೆ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net