

ಅಮೆರಿಕ: ತಾಯಿಯೊಬ್ಬಳು ಮಗುವಿಗೆ ಹಾಲುಣಿಸಿ ತೊಟ್ಟಿಲಲ್ಲಿ ಮಲಗಿಸುವ ಬದಲು ಆಕಸ್ಮಿಕವಾಗಿ ತನ್ನ ಮಗುವನ್ನು ಓವನ್ ಒಳಗೆ ಹಾಕಿ ಮಗುವನ್ನು ಕೊಂದಿದ್ದಾರೆ. ಈ ಘಟನೆಯೊಂದು ಅಮೆರಿಕ ಮಿಸೌರಿಯಲ್ಲಿ ನಡೆದಿದೆ.
ಮರಿಯಾ ಥಾಮಸ್ ಮಗುವನ್ನು ಕೊಂದ ಆರೋಪಿ ತಾಯಿ. ರಾತ್ರಿ ಮಗುವಿಗೆ ಹಾಲುಣಿಸಿದ ನಂತರ ತೊಟ್ಟಿಲಲ್ಲಿ ಮಲಗಿಸುವ ಬದಲು ಓವನ್ನಲ್ಲಿ ಮಲಗಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ.
ನಡೆದಿದ್ದೇನು?: ಮಗು ಹಸಿವಿನಿಂದ ಅಳುತ್ತಿತ್ತು. ನಿದ್ದೆ ಕಣ್ಣಿನಲ್ಲಿದ್ದ ತಾಯಿ ಎದ್ದು ಮಗುವಿಗೆ ಹಾಲು ಕುಡಿಸಿದ್ದಾಳೆ. ನಂತರ ತೊಟ್ಟಿಲಿಗೆ ಹಾಉವ ಬದಲಾಗಿ ಓವನ್ ಒಳಗೆ ಹಾಕಿದ್ದಾಳೆ. ಆಗ ಇದು ಆಕೆಯ ಅರಿವಿಗೆ ಬಂದಿಲ್ಲ. ಬೆಳಗ್ಗೆ ಎದ್ದಾಗ ಅಕಸ್ಮಾತ್ ಮಗುವನ್ನು ಒಲೆಯಲ್ಲಿ ಮಲಗಿಸಿರುವುದು ಅರಿವಾಯಿತು. ಓವನ್ ತೆರೆದು ನೋಡಿದಾಗ ಮಗು ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು.
ಕಾನ್ಸಾಸ್ ಸಿಟಿ ಪೊಲೀಸರಿಗೆ ಮರಿಯಾ ಎಂಬ ಮಹಿಳೆ ತನ್ನ ಮಗುವನ್ನು ಒಲೆಯಲ್ಲಿ ಸುಟ್ಟು ಸಾಯಿಸಿದ್ದಳು ಎಂಬ ಮಾಹಿತಿ ಸಿಕ್ಕಿತು. ಪೊಲೀಸರು ತನಿಖೆ ಆರಂಭಿಸಿದಾಗ, ರಾತ್ರಿ ಮಗುವಿಗೆ ಹಾಲುಣಿಸಿದ ನಂತರ ತೊಟ್ಟಿಲಲ್ಲಿ ಮಲಗಿಸುವ ಬದಲು ಓವನ್ನಲ್ಲಿ ಮಲಗಿಸಿದ್ದೆ ಎಂದು ಹೇಳಿಕೊಂಡಿದ್ದಾಳೆ. ತಾಯಿ ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿದ್ದಾಳಾ? ಆಕೆ ಮಾನಸಿಕ ಅಸ್ವಸ್ಥತೆನಾ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.