

ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹವನ್ನು ಸುಗಮಗೊಳಿಸಲು ಆರಂಭವಾದ ಫಾಸ್ಟಾ್ಯಗ್ ವ್ಯವಸ್ಥೆ, ಇಂದು ದೇಶದ ರಾಷ್ಟ್ರೀಯ ಭದ್ರತೆ ಮತ್ತು ಅಪರಾಧ ತನಿಖೆಯ ಪ್ರಮುಖ ‘ಡಿಜಿಟಲ್ ಪತ್ತೇದಾರಿ ಆಯುಧ’ವಾಗಿ ಬದಲಾಗುತ್ತಿರುವ ರೀತಿ ಅತ್ಯಂತ ಕುತೂಹಲಕಾರಿಯಾಗಿದೆ. ಮೊದಲು, ನಗದು ಅಥವಾ ಯುಪಿಐ ಮೂಲಕ ಟೋಲ್ ಶುಲ್ಕ ಪಾವತಿಸಲು ಎಲ್ಲ ವಾಹನಗಳೂ ನಿಲ್ಲುತ್ತಿದ್ದವು. ಅದರಿಂದ ಕಿಲೋಮೀಟರ್ಗಟ್ಟಲೆ ಸರತಿ ಸಾಲು ಸೃಷ್ಟಿಯಾಗುತ್ತಿತ್ತು. ಹಾಗಾಗಿ, ವಾಹನಗಳು ಟೋಲ್ಗೆ ಬರುತ್ತಿದ್ದಂತೆಯೇ ಆಟೋಮ್ಯಾಟಿಕ್ ಆಗಿ ಶುಲ್ಕ ಕಡಿತವಾಗುವಂಥ ತಂತ್ರಜ್ಞಾನ ಆಧಾರಿತ ‘ಫಾಸ್ಟ್ಯಾಗ್’ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು.
ಮಧ್ಯರಾತ್ರಿಯ ಸಮಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ವೇಗವಾಗಿ ಧಾವಿಸುತ್ತಿದ್ದ ಕಪ್ಪು ಬಣ್ಣದ ಎಸ್ಯುುವಿ ಕಾರೊಂದು ಟೋಲ್ ಪ್ಲಾಜಾವನ್ನು ತಲುಪುತ್ತದೆ. ಚಾಲಕ ಕಾರಿನ ಗಾಜನ್ನು ಕೆಳಗಿಳಿಸುವುದಿಲ್ಲ, ಹಣವನ್ನೂ ನೀಡುವುದಿಲ್ಲ. ಕೇವಲ ಎರಡು ಸೆಕೆಂಡುಗಳಲ್ಲಿ ಟೋಲ್ನ ಬ್ಯಾರಿಕೇಡ್ ತೆರೆದುಕೊಳ್ಳುತ್ತದೆ, ವಾಹನ ಮಿಂಚಿನ ವೇಗದಲ್ಲಿ ಮುಂದೆ ಸಾಗುತ್ತದೆ. ತಾವಿನ್ನು ಪೊಲೀಸರ ಕಣ್ಣು ತಪ್ಪಿಸಿ ಸುರಕ್ಷಿತವಾಗಿ ಪಾರಾದೆವು ಎಂದು ಕಾರಿನಲ್ಲಿದ್ದವರು ಭಾವಿಸುತ್ತಾರೆ.
ಆದರೆ, ಅದೇ ಸೆಕೆಂಡಿನಲ್ಲಿ ದೆಹಲಿಯ ಕೇಂದ್ರ ಕಂಟ್ರೋಲ್ ರೂಂ ಮತ್ತು ರಾಜ್ಯ ಪೊಲೀಸ್ ಕೇಂದ್ರಸ್ಥಾನದಲ್ಲಿ ‘ರೆಡ್ ಅಲರ್ಟ್’ ಬೆಳಗುತ್ತದೆ! ಏಕೆಂದರೆ, ಆ ಕಾರಿನ ವಿಂಡ್ಶೀಲ್ಡ್ ಮೇಲಿದ್ದ ಸಣ್ಣ ಫಾಸ್ಟ್ಯಾಗ್ ಸ್ಟಿಕ್ಕರ್ ಮತ್ತು ಟೋಲ್ ಪ್ಲಾಜಾದಲ್ಲಿದ್ದ ಹೈಟೆಕ್ ಕ್ಯಾಮರಾಗಳು ಆ ವಾಹನದ ಪ್ರತಿಯೊಂದು ವಿವರವನ್ನೂ ತನಿಖಾ ಸಂಸ್ಥೆಗಳಿಗೆ ಕ್ಷಣಾರ್ಧದಲ್ಲಿ ಕಳಿಸಿರುತ್ತವೆ. ಮುಂದಿನ ಟೋಲ್ ತಲುಪುವ ಹೊತ್ತಿಗೆ ಆ ಕಾರು ಭದ್ರತಾ ಪಡೆಗಳ ವಶದಲ್ಲಿರುತ್ತದೆ!
ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಸಾಗುವ ವಾಹನಗಳ ಚಲನವಲನದ ಮೇಲೆ ಕಣ್ಣಿಡಲು ಮತ್ತು ಶಂಕಿತ ಅಪರಾಧ ಚಟುವಟಿಕೆಗಳನ್ನು ತಡೆಯಲು ಹೆದ್ದಾರಿ ಕಣ್ಣಾವಲು ವ್ಯವಸ್ಥೆಯನ್ನು ಬಲಪಡಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ದೇಶನದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಜಾರಿ ನಿರ್ದೇಶನಾಲಯ (ಇಡಿ), ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ), ರಾಜ್ಯಗಳ ಪೊಲೀಸ್ ಇಲಾಖೆಗಳು ಹಾಗೂ ವಿವಿಧ ಕೇಂದ್ರ ಗುಪ್ತಚರ ಸಂಸ್ಥೆಗಳಿಗೆ ಫಾಸ್ಟಾ್ಯಗ್ ಡೇಟಾಬೇಸ್ನ ಕೆಲವಷ್ಟು ಮಹತ್ವದ ಮಾಹಿತಿಯನ್ನು ರಿಯಲ್ ಟೈಮ್ಲ್ಲಿ ಒದಗಿಸಲಾಗುತ್ತಿದೆ.
ಕೃತ್ಯ ನಡೆದ ತಕ್ಷಣವೇ ತನಿಖಾ ಸಿಬ್ಬಂದಿಗೆ ಅಲರ್ಟ್ ಸಿಗಬೇಕು ಎಂಬುದು ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ. ಯಾವುದೇ ಪ್ರಮುಖ ಅಪರಾಧ ಪ್ರಕರಣದಲ್ಲಿ ಭಾಗಿಯಾದ ವಾಹನ ಅಥವಾ ಭಯೋತ್ಪಾದನೆಯ ಶಂಕಿತ ವಾಹನವನ್ನು ತನಿಖಾಧಿಕಾರಿಗಳು ಒಮ್ಮೆ ಬ್ಲಾ್ಯಕ್ಲಿಸ್ಟ್ ಅಥವಾ ವಾಚ್ಲಿಸ್ಟ್ಗೆ ಸೇರಿಸಿದರೆ, ಆ ವಾಹನ ದೇಶದ ಯಾವುದೇ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ದಾಟಿದರೂ ಅದೇ ಕ್ಷಣದಲ್ಲೇ ಸಂಬಂಧಪಟ್ಟ ತನಿಖಾ ತಂಡಕ್ಕೆ ಸ್ವಯಂಚಾಲಿತ ಸಂದೇಶ ಮತ್ತು ವಾಹನದ ಜಿಯೋ ಲೋಕೇಶನ್ ರವಾನೆಯಾಗುತ್ತದೆ.
ಫಾಸ್ಟಾ್ಯಗ್ ಮೂಲಕ ಅಪರಾಧಿಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯ ಹಿಂದೆ ಅತ್ಯಂತ ಸಂಕೀರ್ಣವಾದ, ಆದರೆ ಅತ್ಯಂತ ಪರಿಣಾಮಕಾರಿಯಾದ ತಾಂತ್ರಿಕ ಹಂತಗಳಿವೆ:
ವಿಬೀಡ್ ಎಂದರೆ ವೆಹಿಕಲ್ ಬೋರ್ನ್ ಇಂಪ್ರೂವೈಸ್ಡ್ ಎಕ್ಸ್ ಪ್ಲೋಸಿವ್ ಡಿವೈಸ್ (ವಿಬಿಐಇಡಿ). ಅಂದರೆ, ವಾಹನಗಳಿಗೆ ಅಳವಡಿಸಿದ ಸುಧಾರಿತ ಸ್ಪೋಟಕ ಸಾಧನಗಳು. ಉಗ್ರಗಾಮಿಗಳು ಸ್ಪೋಟಕಗಳನ್ನು ಹೊತ್ತೊ ಯ್ಯುವ ಸನ್ನಿವೇಶಗಳಲ್ಲಿ ಫಾಸ್ಟಾ್ಯಗ್ ಕಣ್ಣಾವಲು ಕೂಡ ಈಗ ಗೇಮ್ ಚೇಂಜರ್ ಎನಿಸಿದೆ. ಕಳುವಾದ ಕಾರುಗಳು ಅಥವಾ ಶಂಕಿತ ಉಗ್ರರ ವಾಹನಗಳು ಸೂಕ್ಷ್ಮ ಪ್ರದೇಶ ಪ್ರವೇಶಿಸುವುದನ್ನು ತಡೆಯಲು ಮತ್ತು ಘಟನೆ ನಡೆದ ನಂತರ ಅವರ ಚಲನವಲನದ ನಕ್ಷೆಯನ್ನು (ಮೂವ್ವೆುಂಟ್ ಮ್ಯಾಪಿಂಗ್) ತಯಾರಿಸಲು ತನಿಖಾ ಸಂಸ್ಥೆಗಳಿಗೆ ಈ ಡೇಟಾ ಅತ್ಯಂತ ಉಪಯುಕ್ತವಾಗಿದೆ.
ಫಾಸ್ಟಾ್ಯಗ್ ತಂತ್ರಜ್ಞಾನ ದಿಂದ ಅಪರಾಧ ಪತ್ತೆ ಎಂಬುದು ಕೇವಲ ಕಾಗದದ ಮೇಲಿನ ಯೋಜನೆಯಾಗಿ ಉಳಿದಿಲ್ಲ. ಘಟನೆಗಳ ತನಿಖೆಯಲ್ಲಿ ಅಧಿಕಾರಿಗಳಿಗೆ ಇದು ಈಗ ಅತ್ಯಂತ ನೆಚ್ಚಿನ ಅಸ್ತ್ರ. ಅಂತಹ ಒಂದೆರಡು ನೈಜ ಪ್ರಕರಣಗಳ ವಿವರ ಇಲ್ಲಿದೆ.
ಯಾವುದೇ ಡಿಜಿಟಲ್ ಕಣ್ಣಾವಲು ವ್ಯವಸ್ಥೆ ಜಾರಿಗೆ ಬಂದಾಗ ನಾಗರಿಕರ ಖಾಸಗಿತನ ಮತ್ತು ಡೇಟಾ ದುರುಪ ಯೋಗದ ಪ್ರಶ್ನೆಗಳು ಮೂಡುವುದು ಸಹಜ. ಸಾರ್ವಜನಿಕರ ದೈನಂದಿನ ಪ್ರಯಾಣದ ಮಾಹಿತಿ ದುರ್ಬಳಕೆ ಆಗದಂತೆ ತಡೆಯಲು ರಸ್ತೆ ಸಾರಿಗೆ ಸಚಿವಾಲಯ ಕಠಿಣ ಸ್ಟಾ್ಯಂಡರ್ಡ್ ಆಪರೇಟಿಂಗ್ ಪೊ›ಸೀಜರ್ (ಎಸ್ಒಪಿ) ರೂಪಿಸಿದೆ. ಪೊಲೀಸ್ ವರಿಷ್ಠಾಧಿಕಾರಿ ಅಥವಾ ತನಿಖಾ ಸಂಸ್ಥೆಗಳ ಉನ್ನತ ಮಟ್ಟದ ಅಧಿಕಾರಿಗಳು ನಿರ್ದಿಷ್ಟ ಎಫ್ಐಆರ್ ಅಥವಾ ತನಿಖಾ ಕೋರಿಕೆಯ ಆಧಾರದ ಮೇಲೆ ಮನವಿ ಸಲ್ಲಿಸಿದಾಗ ಮಾತ್ರವೇ ಫಾಸ್ಟಾ್ಯಗ್ ಡೇಟಾ ನೀಡ ಲಾಗುತ್ತದೆ. ಸಾಮಾನ್ಯ ನಾಗರಿಕರ ಚಲನವಲನದ ಮೇಲೆ ಅನಗತ್ಯ ಬೇಹು ಗಾರಿಕೆ ನಡೆಸುವುದಕ್ಕೆ ಅವಕಾಶ ಇಲ್ಲ.
ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ‘ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ’ ಜಾರಿಗೆ ತರಲು ಸಜ್ಜಾಗಿದೆ. ಅದರಲ್ಲಿ ಟೋಲ್ ಪ್ಲಾಜಾಗಳ ಬ್ಯಾರಿಕೇಡ್ಗಳ ಬದಲು, ಉಪಗ್ರಹದ ಮೂಲಕವೇ ವಾಹನಗಳ ಟೋಲ್ ಪಾವತಿ ಲೆಕ್ಕಾಚಾರ ನಡೆಯುತ್ತದೆ. ಆಗ ದೇಶದ ಪ್ರತಿಯೊಂದು ನೋಂದಾಯಿತ ವಾಹನದ ರಿಯಲ್ ಟೈಮ್ ಸ್ಥಳದ ಮಾಹಿತಿ ಲಭ್ಯವಾಗುತ್ತದೆ. ವಾಹನ ಕಳವು, ಸರಕು ಕಳ್ಳಸಾಗಣೆ, ಅಪಹರಣ ಮತ್ತು ಉಗ್ರ ಚಟುವಟಿಕೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.
ಫಾಸ್ಟಾ್ಯಗ್ ಕಣ್ಗಾವಲು ವ್ಯವಸ್ಥೆ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಕೆಲವು ಪ್ರಾಯೋಗಿಕ ಸವಾಲುಗಳು ಇದ್ದೇ ಇವೆ. ಅಪರಾಧಿಗಳು ವಾಹನದ ಫಾಸ್ಟಾ್ಯಗ್ ಸ್ಟಿಕ್ಕರ್ ಕಿತ್ತುಹಾಕಿದರೆ ಅಥವಾ ಬೇರೆ ವಾಹನದ ಫಾಸ್ಟಾ್ಯಗ್ ಕ್ಲೋನ್ ಮಾಡಿ ಅಂಟಿಸಿದರೆ ತಕ್ಷಣದ ಪತ್ತೆಗೆ ತೊಡಕಾಗಬಹುದು. ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳನ್ನು ಹೊರತುಪಡಿಸಿ, ಗ್ರಾಮೀಣ ರಸ್ತೆಗಳು ಅಥವಾ ರಾಜ್ಯ ಹೆದ್ದಾರಿಗಳ ಮೂಲಕ ಅಪರಾಧಿಗಳು ಪರಾರಿಯಾದರೆ ಟೋಲ್ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ.