ಆಗಸ್ಟ್​ 15ರಿಂದ ಫಾಸ್ಟ್ಯಾಗ್​ ವಾರ್ಷಿಕ ಪಾಸ್; 3 ಸಾವಿರ ವೆಚ್ಚ, ವರ್ಷಕ್ಕೆ 200 ಟ್ರಿಪ್, ಪಡೆಯೋದು ಹೇಗೆ ಗೊತ್ತಾ?|FASTag

FASTag
Published on

FASTag: ಆಗಸ್ಟ್​ 15ರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಎಂಬ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಪ್ರಾರಂಭಿಸಲಿದೆ. ಇದು ಖಾಸಗಿ ವಾಹನ ಮಾಲೀಕರಿಗೆ ₹3,000 ವೆಚ್ಚಕ್ಕೆ 200 ಟೋಲ್ ಕ್ರಾಸಿಂಗ್​ ಟ್ರಿಪ್​ಗಳಿಗೆ ಒಂದು ವರ್ಷದವರೆಗೆ ಮಾನ್ಯತೆಯ ವಾರ್ಷಿಕ ಪಾಸ್ ಆಗಿದೆ.

ಇತ್ತೀಚಿಗೆ ಕೆಲ ದಿನಗಳ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದ ಈ ಪಾಸ್, ವಿಶೇಷವಾಗಿ ಕಾರುಗಳು, ಜೀಪ್‌ಗಳು ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳ ಫಸ್ಟ್ಯಾಗ್​ಗೆ ಅನ್ವಯಿಸುತ್ತದೆ. ಮುಂಗಡವಾಗಿ 3 ಸಾವಿರ ಕಟ್ಟಿ ರಿಚಾರ್ಜ್​ ಮಾಡಿಸಿಕೊಂಡು ಒಂದು ವರ್ಷದವರೆಗೆ 200 ಟ್ರಿಪ್​ ಗಳಿಗೆ ಉಚಿತವಾಗಿ ಪ್ರಯಾಣಿಸಬಹುದು. ಟೋಲ್ ಪಾವತಿಗಳನ್ನು ಸುಗಮಗೊಳಿಸುವುದು, ಪುನರಾವರ್ತಿತ ಆನ್‌ಲೈನ್ ವಹಿವಾಟುಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಈ ಪಾಸ್ ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹೊಸ ಟ್ಯಾಗ್ ಖರೀದಿಸುವ ಅಗತ್ಯವಿರುವುದಿಲ್ಲ. ಅದರ ಎಲ್ಲಾ ಅರ್ಹತಾ ಅವಶ್ಯಕತೆಗಳಣನ್ನು ಪೂರೈಸಿದರೆ, ರಾಷ್ಟ್ರೀಯ ಹೆದ್ದಾರಿ, ಎಕ್ಸ್​ಪ್ರೆಸ್​​ ವೇ, ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ(MoRTH) ನಿರ್ವಹಿಸುವ ಟೋಲ್​ ಪ್ಲಾಜ್​ಗಳಿಗೆ ಅನ್ವಯಿಸುತ್ತದೆ. ಆದರೆ ಸ್ಥಳೀಯ ಟೋಲ್ ರಸ್ತೆಗಳು, ಅಥವಾ ಫಾಸ್ಟ್ಯಾಗ್​ನಲ್ಲಿ ಸಂಯೋಜಿಸದ ರಾಜ್ಯ ಹೆದ್ದಾರಿಗಳಿಗೆ ಅನ್ವಯಿಸುವುದಿಲ್ಲ.

ಆಗಸ್ಟ್ 15ರ ಮುನ್ನವೇ FASTag ವಾರ್ಷಿಕ ಪಾಸ್​ ಪಡೆಯುವುದು ಹೇಗೆ?

ವಾರ್ಷಿಕ ಪಾಸ್ ಖರೀದಿಯನ್ನು ಸರಳವಾಗಿ ಆನ್​ಲೈನ್​ನಲ್ಲಿ ಪಡೆಯಬಹುದಾಗಿದೆ. ರಾಜಮಾರ್ಗ ಯಾತ್ರಾ ಅಪ್ಲಿಕೇಷನ್ ಆ್ಯಪ್ ಅಥವಾ ಅಧಿಕೃತ NHAI/MoRTH ಪೋರ್ಟಲ್ ಮೂಲಕ ವಾರ್ಷಿಕ ಪಾಸ್ ಅನ್ನು ಪಡೆಯಬಹುದು. ಫಾಸ್ಟ್ಯಾಗ್ ಸರ್ವಿಸ್​ನಲ್ಲಿ ನೋಂದಾಯಿಸಬೇಕು.

ವಾಹನ ಮತ್ತು ಫಾಸ್ಟ್ಯಾಗ್ ವಿವರ ಲಾಗಿನ್ ಮಾಡಿ ನಮೂದಿಸಿ

ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಆಗಬೇಕು. ಲಾಗಿನ್ ಆಗದಿದ್ದರೆ ನೇರವಾಗಿ ತಮ್ಮ ವಾಹನ ನೋಂದಣಿ ಸಂಖ್ಯೆ ಮತ್ತು ಫಾಸ್ಟ್‌ಟ್ಯಾಗ್ ಐಡಿಯನ್ನು ನಮೂದಿಸಬೇಕು.

ಅರ್ಹತೆಯನ್ನು ಪರಿಶೀಲನೆ

ಫಾಸ್ಟ್ಯಾಗ್ ಸಕ್ರಿಯವಾಗಿದೆಯೇ, ಸರಿಯಾಗಿ ಲಗತ್ತಿಸಲಾಗಿದೆಯೇ, ಸರಿಯಾದ ವಾಹನ ನೋಂದಣಿಯೊಂದಿಗೆ ಸಂಪರ್ಕವನ್ನು ಪರಿಶೀಲಿಸುತ್ತದೆ. ಫಾಸ್ಟ್ಯಾಗ್​ ಅನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂಬುದನ್ನು ಖಚಿತಪಡಿಸಬೇಕು.

ಹಣ ಪಾವತಿ ಮಾಡಬೇಕು

ಪಾಸ್ ಬಳಕೆಗೆ ಅರ್ಹತೆ ಹೊಂದಿದ್ದು ದೃಢಪಟ್ಟರೇ, ಬಳಕೆದಾರರು UPI, ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಅಥವಾ ನೆಟ್ ಬ್ಯಾಂಕಿಂಗ್‌ನಂತಹ ಬಹು ಪಾವತಿ ಆಯ್ಕೆಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ 3,000 ರೂ.ಗಳನ್ನು ಪಾವತಿಸಬೇಕು.

ವಾರ್ಷಿಕ ಪಾಸ್ ಲಿಂಕ್ ಮಾಡುವಿಕೆ

ಹಣ ಪಾವತಿಯ ನಂತರ, ವಾರ್ಷಿಕ ಪಾಸ್ ಅನ್ನು ಅಸ್ತಿತ್ವದಲ್ಲಿರುವ FASTag ಖಾತೆ ಮತ್ತು ವಾಹನ ನೋಂದಣಿಗೆ ಲಿಂಕ್ ಮಾಡಲಾಗುತ್ತದೆ.

ದೃಢೀಕರಣ

ಎಲ್ಲಾ ಮುಗಿದ ಬಳಿಕ  ಆಗಸ್ಟ್ 15, 2025 ರಂದು ಪಾಸ್ ಸಕ್ರಿಯಗೊಳ್ಳುತ್ತದೆ ಎಂದು ಬಳಕೆದಾರರಿಗೆ SMS ದೃಢೀಕರಣವನ್ನು ಬರುತ್ತದೆ. ನೀವು ಇಂದೇ ಪಾವತಿ ಮಾಡಿ ಪಾಸ್ ಪಡೆದಿದ್ರು ಆಗಸ್ಟ್ 15ರಿಂದಲೇ ಅದು ಕಾರ್ಯನಿರ್ವಹಿಸುತ್ತದೆ.

ವಾರ್ಷಿಕ ಪಾಸ್ ಅರ್ಹತಾ ಮಾನದಂಡಗಳು

ಈಗ ಇರುವ ವಾಹನದ ಫಾಸ್ಟ್ಯಾಗ್ ಸಕ್ರಿಯವಾಗಿರಬೇಕು. ಯಾವುದೇ ನಿಯಮ ಉಲ್ಲಂಘನೆ, ಬಾಕಿ ಹಣ ಪಾವತಿಯಿಂದಾಗಿ ಕಪ್ಪು ಪಟ್ಟಿಗೆ ಸೇರಿರಬಾರದು.

ಫಾಸ್ಟ್‌ಟ್ಯಾಗ್ ಅನ್ನು ವಾಹನದ ವಿಂಡ್‌ಶೀಲ್ಡ್‌ಗೆ ಸರಿಯಾಗಿ ಜೋಡಿಸಬೇಕು. ಇದರಿಂದಾಗಿ ಟೋಲ್ ಪ್ಲಾಜಾಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಅದನ್ನು ಸ್ಕ್ಯಾನ್ ಮಾಡಬಹುದು.

ವಾಹನ ನೋಂದಣಿ ಸಂಖ್ಯೆ (VRN) ಅನ್ನು FASTag ಖಾತೆಗೆ ಸರಿಯಾಗಿ ಲಿಂಕ್ ಮಾಡಬೇಕು. ಈ ಲಿಂಕ್ ಟೋಲ್ ಸಂಗ್ರಹದ ಸಮಯದಲ್ಲಿ ಸುಗಮ ಪರಿಶೀಲನೆಗೆ ಸಹಾಯವಾಗುತ್ತದೆ.

ಈ ಪಾಸ್ ಖಾಸಗಿ ವಾಣಿಜ್ಯೇತರ ವಾಹನಗಳಿಗೆ ಮಾತ್ರ ಲಭ್ಯ. ವಾಣಿಜ್ಯ ವಾಹನಗಳು, ಟ್ರಕ್‌ಗಳು ಮತ್ತು ಬಸ್‌ಗಳು ಈ ಪ್ರಿಪೇಯ್ಡ್​ ಪಾಸ್‌ಗೆ ಅರ್ಹವಾಗಿರುವುದಿಲ್ಲ.

ವಾರ್ಷಿಕ ಪಾಸ್‌ನ ಪ್ರಮುಖ ಷರತ್ತುಗಳು ಮತ್ತು ಮಿತಿಗಳು

ಈ ಪಾಸ್ ಅನ್ನು ವರ್ಗಾಯಿಸಲಾಗುವುದಿಲ್ಲ. ಫಾಸ್ಟ್‌ಟ್ಯಾಗ್ ನೋಂದಾಯಿಸಲ್ಪಟ್ಟ ಮತ್ತು ಅಂಟಿಸಲಾದ ನಿರ್ದಿಷ್ಟ ವಾಹನಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ವಾರ್ಷಿಕ ಪಾಸ್‌ಗಾಗಿ ಮಾಡಿದ ಪಾವತಿಗಳನ್ನು ಯಾವುದೇ ಸಂದರ್ಭಗಳಲ್ಲಿ ಮರುಪಾವತಿಸಲಾಗುವುದಿಲ್ಲ.

ರಾಷ್ಟ್ರೀಯ ಹೆದ್ದಾರಿ(NHAI) ಮತ್ತು ಎಕ್ಸ್‌ಪ್ರೆಸ್‌ವೇ MoRTH ನಿರ್ವಹಿಸುವ ಟೋಲ್ ಪ್ಲಾಜಾಗಳಲ್ಲಿ ಮಾತ್ರ ಪಾಸ್ ಮಾನ್ಯವಾಗಿರುತ್ತದೆ. ರಾಜ್ಯ ಹೆದ್ದಾರಿಗಳು, ಸ್ಥಳೀಯ ರಸ್ತೆಗಳು ಅಥವಾ ಖಾಸಗಿ ಟೋಲ್ ನಿರ್ವಾಹಕರ ಟೋಲ್‌ಗಳಿಗೆ ಈ ಪಾಸ್ ಅನ್ವಯಿಸುವುದಿಲ್ಲ.

ಪಾಸ್ ಅವಧಿ ಮುಗಿದ ನಂತರ, ಬಳಕೆದಾರರು ಪ್ರಿಪೇಯ್ಡ್ ಸೌಲಭ್ಯವನ್ನು ಬಳಸುವುದನ್ನು ಮುಂದುವರಿಸಲು ಬಯಸಿದರೆ ಹೊಸ ವಾರ್ಷಿಕ ಪಾಸ್ ಅನ್ನು ಮ್ಯಾನುವಲ್ ಆಗಿ ಖರೀದಿಸಬೇಕು.

ಬಳಕೆದಾರರು ತಮ್ಮ ಬಾಕಿ ಬ್ಯಾಲೆನ್ಸ್ ಅನ್ನು ಟ್ರ್ಯಾಕ್ ಮಾಡಲು ವಹಿವಾಟುಗಳು ಮತ್ತು ಪಾಸ್ ಬಳಕೆಯ ಅಧಿಸೂಚನೆಗಳನ್ನು ಎಸ್​​ಎಂಎಸ್​ ಮೂಲಕ ತಿಳಿಯಬಹುದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net