

ಬೆಂಗಳೂರು: ತೋಟಗಾರಿಕಾ ಬೆಳೆಗಾರರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದ್ದು, ಬೆಳೆ ವಿಮೆ ನೋಂದಣಿ ಅವಧಿಯನ್ನು ಜು.10ರವರೆಗೆ ವಿಸ್ತರಿಸಿದೆ.
ರಾಜ್ಯದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯು ವಿಮಾ ಕಂಪನಿಗಳ ಒಪ್ಪಿಗೆಯೊಂದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಗಡುವು ವಿಸ್ತರಿಸಲು ಮನವಿ ಮಾಡಿಕೊಂಡಿತ್ತು. ಪ್ರಸ್ತಾವನೆಗೆ ಕೇಂದ್ರ ತ್ವರಿತವಾಗಿ ಸ್ಪಂದಿಸಿದೆ. ನಿಗದಿತ ಬೆಳೆಗಳು, ಪ್ರೀಮಿಯಂ ದರ ಹಾಗೂ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ.
ಸಾಲಗಾರರಲ್ಲದ ರೈತರು ಬ್ಯಾಂಕ್ ಅಥವಾ ಗೊತ್ತುಪಡಿಸಿದ ವಿಮಾ ಏಜೆಂಟರ ಮೂಲಕ ಕಂತು ಪಾವತಿ ಮಾಡಬಹುದಾಗಿದೆ. ಸಾಲಗಾರ ರೈತರ ವಿಮಾ ಕಂತನ್ನು ಸಾಲದ ಖಾತೆಯಲ್ಲಿ ಬ್ಯಾಂಕ್ಗಳು ಕಡಿತಗೊಳಿಸಿ, ಜು.15ರೊಳಗೆ ಆಯಾ ವಿಮಾ ಕಂಪನಿಗಳಿಗೆ ಭರಿಸಬೇಕು ಎಂದು ಸೂಚಿಸಲಾಗಿದೆ.