ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಹೊರಟಿದ್ದ ಫಾರೂಕ್​ ಅಬ್ದುಲ್ಲಾಗೆ ತಡೆ; ತಿರುಗಿಬಿದ್ದ ಮುಫ್ತಿ

Farukh Abdullah
Published on

ಶ್ರೀನಗರ: ಮಿಲಾಡ್​​ ಅನ್​ ನಬಿ ಹಿನ್ನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಹಜರತ್ಬಾಲ್ ಮಸೀದಿಗೆ ಹೊರಟಿದ್ದ ನ್ಯಾಷನಲ್ ಕಾನ್ಫರೆನ್ಸ್​ ಅಧ್ಯಕ್ಷ ಫಾರೂಕ್​ ಅಬ್ದುಲ್ಲಾ ಅವರನ್ನು ತಡೆಯಲಾಗಿದೆ.

ಕಳೆದ ವರ್ಷ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ದಿನದಿಂದಲೂ ಗೃಹಬಂಧನದಲ್ಲಿದ್ದ ಫಾರೂಕ್​ ಅಬ್ದಲ್ಲಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದಾರೆ.

ಫಾರೂಕ್​ ಅಬ್ದಲ್ಲಾ ಅವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡದ ಜಮ್ಮುಕಾಶ್ಮೀರದ ಆಡಳಿತದ ವಿರುದ್ಧ ನ್ಯಾಷನಲ್​ ಕಾನ್ಫರೆನ್ಸ್​ ತಿರುಗಿಬಿದ್ದಿದ್ದು, ಪ್ರಾರ್ಥನೆ ಮಾಡುವುದು ನಮ್ಮ ಮೂಲಭೂತ ಹಕ್ಕಾಗಿದ್ದು, ಈಗ ಅದರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದೆ.

ಅಬ್ದುಲ್ಲಾರನ್ನು ಬ್ಲಾಕ್ ಮಾಡಿದ್ದರ ಬಗ್ಗೆ ಪೀಪಲ್ಸ್​ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದಿದ್ದಾರೆ. ಮುಫ್ತಿ ಅವರು ಫಾರೂಕ್​ ಅಬ್ದುಲ್ಲಾ ಅವರ ಕಟ್ಟಾ ವಿರೋಧ ಪಕ್ಷದವರು. ಆದರೆ ಇತ್ತೀಚೆಗೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು, ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿವೆ.

ಪ್ರವಾದಿ ಮೊಹಮ್ಮದ್​ ಅವರ ಜನ್ಮವಾರ್ಷಿಕೋತ್ಸವ ನಿಮಿತ್ತ ಆಚರಿಸುವ ಮಿಲಾಡ್​ ಅನ್​ ನಬಿಯಂದು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net