ಇಂದಿನಿಂದ ರೈತರಿಂದ ವಿನೂತನ ಪ್ರತಿಭಟನೆ - ಜಂತರ್​ ಮಂತರ್​ನಲ್ಲಿ 'ಕಿಸಾನ್​​ ಸಂಸದ್​'!

kisan
Published on

ನವದೆಹಲಿ : ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದಿನಿಂದ ದೆಹಲಿಯ ಜಂತರ್​ ಮಂತರ್​ನಲ್ಲಿ 'ಕಿಸಾನ್ ಸಂಸದ್'​ ನಡೆಸಲಿದ್ದಾರೆ. ಸಂಸತ್​ ಅಧಿವೇಶನದ ಅವಧಿಯಲ್ಲಿ ಅದೇ ಮಾದರಿಯಲ್ಲಿ ಪ್ರತಿ ದಿನ 200 ಜನರ ಗುಂಪುಗಳಲ್ಲಿ ಸೇರಿ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಸಿಂಘು ಗಡಿಯ ಪ್ರತಿಭಟನಾ ಧರಣಿ ಸ್ಥಳದಿಂದ ಪ್ರತಿದಿನ 200 ರೈತರು ಪೊಲೀಸರ ಬಂದೋಬಸ್ತಿನಲ್ಲಿ ಜಂತರ್ ಮಂತರ್​ಗೆ ತೆರಳಿ, ಈ ಕಿಸಾನ್ ಸಂಸದ್​ ನಡೆಸಲಿದ್ದಾರೆ. ಇಂದಿನಿಂದ ಆಗಸ್ಟ್​ 9 ರವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಈ ಪ್ರತಿಭಟನೆಯನ್ನು ನಡೆಸಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಪ್ರತಿಭಟನಾಕಾರರು ಶಾಂತಿ ಕಾಪಾಡಬೇಕು ಮತ್ತು ಕೋವಿಡ್​ ಪ್ರೊಟೊಕಾಲನ್ನು ಪಾಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.

ಸಂಸತ್ತಿನ ರೀತಿನೀತಿಗಳನ್ನು ಅನುಸರಿಸಿ ಸಭೆ ನಡೆಸಲಾಗುವುದು. ಸ್ಪೀಕರ್, ಡೆಪ್ಯುಟಿ ಸ್ಪೀಕರ್​ರಂತೆ ಕೆಲವು ನಾಯಕರು ಸಾರಥ್ಯ ವಹಿಸುವರು. ಸಂಸತ್ತನ್ನು ಹೇಗೆ ನಡೆಸಬೇಕು ಎಂಬುದನ್ನು ನಾವು ತೋರಿಸಿಕೊಡಲಿದ್ದೇವೆ ಎಂದು ಚಳುವಳಿಗಾರ ಯೋಗೇಂದ್ರ ಯಾದವ್ ಹೇಳಿದ್ದಾರೆ. ಕೇರಳ ಮತ್ತು ಕರ್ನಾಟಕ ಸೇರಿದಂತೆ ದೂರದೂರದಿಂದ ಇದಕ್ಕಾಗಿ ರೈತರು ಆಗಮಿಸಲಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net