

ರಾಣೆಬೆನ್ನೂರ: ಕಾಡು ಹಂದಿಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದ್ದು ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ಬೆಳೆಹಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನುಗಳಿಗೆ ಕಾಡುಹಂದಿಗಳು ರಾತ್ರೋರಾತ್ರಿ ದಾಳಿ ಮಾಡಿ ಮೆಕ್ಕೆಜೋಳ ಬೆಳೆ ಹಾಳು ಮಾಡುತ್ತಿವೆ. ಇದರಿಂದ ರೈತರು ಆಥಿರ್ಕವಾಗಿ ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯ ಸರ್ಕಾರ ಬೆಳೆಹಾನಿಗೆ ನೀಡುತ್ತಿರುವ ಪರಿಹಾರ ಕೂಡಲೇ ಯಾವುದಕ್ಕೂ ಸಾಲುವುದಿಲ್ಲ. ಅರಣ್ಯಾಧಿಕಾರಿಗಳು ಕಾಡುಹಂದಿಗಳು ಅರಣ್ಯ ಪ್ರದೇಶ ಬಿಟ್ಟು ಹೊರಹೋಗದಂತೆ ತಡೆಯಬೇಕು. ಬೆಳೆಹಾನಿಯಾದ ರೈತರಿಗೆ ತ್ವರಿತಗತಿಯಲ್ಲಿ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತರಾದ ಹನುಮಂತಪ್ಪ ಕಬ್ಬಾರ, ಮಂಜುನಾಥ ಸಂಭೋಜಿ, ರಾಜೇಶ ಅಂಗಡಿ, ಬಸವರಾಜ ಮೇಗಳಮನಿ, ಲಲಿತಮ್ಮ ಲಮಾಣಿ, ಶೀಲಮ್ಮ ಲಮಾಣಿ, ಹಾಲೇಶಪ್ಪ ಲಮಾಣಿ, ಗಣೇಶಪ್ಪ ಲಮಾಣಿ, ಶೈಲಾ ಹರನಗಿರಿ, ಮರ್ದನಸಾಬ ಶಿಡೇನೂರ ಮತ್ತಿತರರು ಪಾಲ್ಗೊಂಡಿದ್ದರು.