ಶಾಸಕರ ಮನೆ ಎದುರು ರೈತರ ಪ್ರತಿಭಟನೆ

6-RNR-05
Published on

ರಾಣೆಬೆನ್ನೂರ: ಬೆಳೆವಿಮೆ ಹಾಗೂ ಬೆಳೆಹಾನಿ ಪರಿಹಾರ ಮತ್ತು ಜಿಲ್ಲೆಯ ವರದಾ ನದಿಗೆ ಬೇಡ್ತಿ ನದಿ ಜೋಡಣೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದ ಸ್ಥಳಿಯ ಶಾಸಕ ಮನೆ ಎದುರು ಪ್ರತಿಭಟನೆ ನಡೆಸಿದರು.

ರೈತ ಸಂದ ತಾಲೂಕು ಅಧ್ಯಕ್ಷ ಸುರೇಶ ಹೊನ್ನಪ್ಪನವರ ಮಾತನಾಡಿ, ರೈತರ ಬಹುಬೇಡಿಕೆ ಹಾಗೂ ಮಹಾತ್ವಾಕಾಂಕ್ಷಿ ಯೋಜನೆಯಾಗಿರುವ ವರದಾ -ಬೇಡ್ತಿ ನದಿ ಜೋಡಣೆ ಯೋಜನೆ ಜಾರಿಗೊಳಿಸಬೇಕು. ಅದಕ್ಕಾಗಿ ರೈತರು ಕಳೆದ ಎರಡು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಆದರೆ, ಇನ್ನೂ ವಿಳಂಬಕ್ಕೆ ಅವಕಾಶ ಕೂಡದು, ರೈತನಿಗೆ ದುಡಿಯುವ ಶಕ್ತಿ ಕೊಡಲು ಉತ್ತಮ ಅವಕಾಶಕ್ಕೆ ಇದು ಸಕಾಲವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಹುಟ್ಟಿ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿ, ಯಲ್ಲಾಪುರ ಬಳಿ ಉಪನದಿಗಳನ್ನು ಕೂಡಿಕೊಂಡು ಅಂಕೋಲಾ ತಾಲೂಕು ಪ್ರವೇಶಿಸಿ ಗಂಗಾವಳಿ ನದಿಯಾಗಿ ಅರಬ್ಬಿ ಸಮುದ್ರ ಸೇರುವ ನೀರನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಕೃಷಿ ಭೂಮಿಯ ನೀರಾವರಿಗೆ ಕೇಳುತ್ತಿದ್ದೇವೆ.

ಶಾಸಕರು ಕೂಡಲೇ ಜಿಲ್ಲೆಗೆ ನೀರಾವರಿ ಒದಗಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ಸರ್ಕಾರ ಗಮನ ಸೆಳೆಯಬೇಕು ಎಂದು ರೈತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಶಾಸಕರ ಆಪ್ತ ಸಹಾಯಕ ಶ್ರೀನಿವಾಸ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತರಾದ ಲೋಕೇಶ ಸುತಾರ, ವೀರಭದ್ರಪ್ಪ ಕೊಟ್ಟೂರ, ಈರನಗೌಡ ಕೋಣನತಲೆ, ರಮೇಶಗೌಡ್ರ ಹಲಗೇರಿ, ರಮೇಶ ಮೂಲಿಮನಿ, ಕರೇಗೌಡ ಕರೇಗೌಡ್ರ, ವಸಂತ ಅಣ್ಣೇರ, ಲಕ್ಷ$್ಮಣ ಪೂಜಾರ, ಗಂಗಪ್ಪ ಜಾಗಟಿ, ನಾಗಪ್ಪ ಮೀನಕಟ್ಟಿ, ಯಲ್ಲಪ್ಪ ಯಲಿಗಾರ, ಮಜಪ್ಪ ಚಕ್ರಸಾಲಿ, ಸಂಜೀವ ಎಲಿಗಾರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net