ರೈತ ಪ್ರತಿಭಟನೆ ಎಂಟನೆ ದಿನಕ್ಕೆ - ಪಂಜಾಬ್ ಸಿಎಂ ದೆಹಲಿಗೆ, ಕೇಂದ್ರ ಸಚಿವ ಷಾ ಜತೆಗೆ ಮಾತುಕತೆ

New Delhi: Punjab Chief Minister Amarinder Singh arrives to pay tributes to the Father of the Nation Mahatma Gandhi at Rajghat ahead of staging relay 'dharna' along with his Cabinet colleagues and legislators at Jantar Mantar to highlight the state's "power crisis and critical essential supplies" situation amid the Centre's alleged adamant refusal to allow movement of goods trains due to farmers' agitation; in New Delhi on Nov 4, 2020. (Photo: IANS)

Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತ ಪ್ರತಿಭಟನೆ ಎಂಟನೆ ದಿನಕ್ಕೆ ಕಾಲಿರಿಸಿದೆ. ಪ್ರತಿಭಟನಾ ನಿರತರಲ್ಲಿ ಬಹುತೇಕರು ಪಂಜಾಬಿನವರು. ಹೀಗಾಗಿ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗುರುವಾರ ಬೆಳಗ್ಗೆಯೇ ದೆಹಲಿಗೆ ತಲುಪಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ನಿವಾಸಕ್ಕೆ ತೆರಳಲಿರುವ ಅವರು ಈ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆ ಕುತೂಹಲ ಕೆರಳಿಸಿದೆ.

ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿರುವ ಪ್ರತಿಭಟನಾಕಾರರು, ಕನಿಷ್ಠ ಬೆಂಬಲ ಬೆಲೆಯನ್ನು ಎಲ್ಲರಿಗೂ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇಂದು ಅಪರಾಹ್ನ ಎರಡನೇ ಸುತ್ತಿನ ಮಾತುಕತೆ ರೈತ ಮುಖಂಡರ ಜತೆಗೆ ನಡೆಯಲಿದ್ದು, ಎಲ್ಲರ ಗಮನವೂ ಅದರ ಮೇಲಿದೆ. ನಿನ್ನೆ ನಡೆದ ಮಾತುಕತೆ ಫಲಪ್ರದವಾಗಿರಲಿಲ್ಲ.

ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು, ಕೇಂದ್ರದ ಕಾನೂನಿಗೆ ಸೆಡ್ಡು ಹೊಡೆವಂತೆ ಫಾರ್ಮರ್ಸ್ ಪ್ರೊಡ್ಯೂಸ್ ಟ್ರೇಡ್ ಆ್ಯಂಡ್ ಕಾಮರ್ಸ್ (ಪ್ರೊಮೋಷನ್ ಆ್ಯಂಡ್ ಫೆಸಿಲಿಟೇಶನ್​) ಬಿಲ್ 2020, ದ ಫಾರ್ಮರ್ಸ್ (ಎಂಪರ್​ಮೆಂಟ್​ ಆ್ಯಂಡ್ ಪ್ರೊಟೆಕ್ಷನ್) ಅಗ್ರಿಮೆಂಟ್ ಆನ್ ಪ್ರೈಸ್ ಅಶ್ಶೂರೆನಸ್ ಆ್ಯಂಡ್ ಫಾರ್ಮ್ ಸರ್ವೀಸಸ್ ಬಿಲ್ 2020, ದ ಅಸ್ಸೆನ್ಶಿಯಲ್ ಕಮಾಡಿಟೀಸ್ (ಅಮೆಂಡಮೆಂಟ್ ) ಬಿಲ್​ ಗಳನ್ನು ಅವರ ಸರ್ಕಾರ ರಾಜ್ಯದಲ್ಲಿ ಅಂಗೀಕರಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net