

ರಾಣೆಬೆನ್ನೂರ: ನಗರದಲ್ಲಿ ಕಳಪೆ ಬೀಜದಿಂದ ಮೋಸ ಹೋದ ರೈತರಿಗೆ 15ದಿನದೊಳಗೆ ಪರಿಹಾರ ನೀಡದಿದ್ದರೆ ಮುಂದಿನ ದಿನದಲ್ಲಿ ನಡೆಯುವ ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂದ ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ಮಾತನಾಡಿ, ಅನ್ನದಾತನ ಬದುಕನ್ನು ಹಾಳು ಮಾಡುವ ಈ ವಂಚನೆ ಪ್ರಕರಣ ಜರುಗಿ 6 ತಿಂಗಳು ಗತಿಸುತ್ತಾ ಬಂದಿದೆ. ಆದರೆ, ಈವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಯಾವ ಹಂತಕ್ಕೆ ಬಂದು ತಲುಪಿತು. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರ ಎಲ್ಲಿಗೆ ಬಂದಿದೆ.
ನಿಸರ್ಗ ಸೀಡ್ಸ್ ಕಂಪನಿಯ ವಾರಸುದಾರರ ಮೇಲೆ ಈವರೆಗೂ ಯಾವ ಯಾವ ಕ್ರಮಗಳನ್ನು ಜರುಗಿಸಲಾಗಿದೆ. ಈ ಹಿಂದೆ ಉಸ್ತುವಾರಿ ಸಚಿವರ ಸಭೆಯಲ್ಲಿ ಸೂಚಿಸಿದಂತೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆಯೇ, ಇಲ್ಲವೇ ಎಂಬುದರ ಬಗ್ಗೆ ಮೋಸ ಹೋದ ರೈತರೆದುರು ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ರೈತ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ದಾನಪ್ಪ ಅಂಗಡಿ, ಹನುಮಂತಪ್ಪ ಕೊಳ್ಳೇರ, ಮಲಕಪ್ಪ ಲಿಂಗದಹಳ್ಳಿ, ಹರಿಹರಗೌಡ ಪಾಟೀಲ, ಭಾಷಾಸಾಬ ರಾಣೆಬೆನ್ನೂರ, ನಿಜಲಿಂಗಪ್ಪ ಲಂಕಣ್ಣನವರ, ಹನುಮಂತಪ್ಪ ತಳವಾರ, ಮಂಜು ಅಮರಾವತಿ, ಶಿವಪ್ಪ ದೊಡ್ಡಮನಿ ಮತ್ತಿತರರು ಪಾಲ್ಗೊಂಡಿದ್ದರು.