ರೈತರ ವ್ಯವಹಾರ ಸಂಘಗಳಲ್ಲೇ ಹೆಚ್ಚು

avt sangha
ಅಗಸನಹಳ್ಳಿ ಪಿಎಸಿಎಸ್ ವಾರ್ಷಿಕ ಸಭೆಯಲ್ಲಿ ವೀರೇಶ್ ಕೊಟಗಿ, ವಿನಯ್, ಮಲ್ಲೇಶಪ್ಪ, ಜಯಮ್ಮ, ಕಮಲಮ್ಮ, ಮಲ್ಲೇಶಪ್ಪ ಇತರರಿದ್ದರು.
Published on

ಆನವಟ್ಟಿ: ರೈತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಹಕಾರಿ ಸಂಘಗಳು ಇಂದು ಅವರ ಪ್ರಮುಖ ವ್ಯವಹಾರ ಕೇಂದ್ರಗಳಾಗುತ್ತಿವೆ ಎಂದು ಅಗಸನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೀರೇಶ್ ಕೊಟಗಿ ಹೇಳಿದರು. ಆನವಟ್ಟಿ ಸಮೀಪದ ಅಗಸನಹಳ್ಳಿ ಗ್ರಾಮದ ಪಿಎಸಿಎಸ್ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಿಗೆ ರೈತರ ಸಹಕಾರ ತುಂಬ ಮುಖ್ಯ ಎಂದರು. ಸಂಘಗಳಲ್ಲಿ ಲೇವಾದೇವಿ, ಠೇವಣಿ ಇಡುವ ಮತ್ತಿತರ ವ್ಯವಹಾರಗಳಗೆ ಮುಕ್ತ ಅವಕಾಶವಿರುತ್ತದೆ. ಮೂಲಕ ಆಡಳಿತ ಮಂಡಳಿ ಜತೆಗೆ ರೈತರು ಸಹ ಸಹಕಾರ ಸಂಘಗಳ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಠೇವಣಿ ಹಣಕ್ಕೆ ಆಕರ್ಷಕ ಬಡ್ಡಿಯನ್ನೂ ನೀಡಲಾಗುತ್ತಿದೆ. ಸಂಘದಲ್ಲಿ 1317 ಸದಸ್ಯರಿಂದ 96,76,825 ರೂ. ಷೇರು ಧನ ಇದ್ದು, ಇದರಲ್ಲಿ 564 ಸದಸ್ಯರಿಗೆ 7,84,23,000 ರೂ. ಸಾಲವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 6 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಘದ ಉಪಾಧ್ಯಕ್ಷ ವಿನಯ್, ನಿರ್ದೇಶಕರಾದ ಮಲ್ಲೇಶಪ್ಪ, ಬಸವರಾಜಪ್ಪ ವೀರನ ಗೌಡ, ಮಲ್ಲೇಶಪ್ಪ, ಸುಭಾಷ, ಶಿವಾಜಿ, ಶಿವಾನಂದಪ್ಪ, ಜಯಮ್ಮ, ಕಮಲಮ್ಮ, ರಾಮಪ್ಪ, ರಾಜು, ಮುಖಂಡರಾದ ಪ್ರಕಾಶ್, ರೇವಣಪ್ಪ, ಸಿಇಒ ಎಂ.ಎಚ್.ಶಿವಕುಮಾರ್, ಸಿಬ್ಬಂದಿ ನಾಗರಾಜ, ಸಂಗೀತಾ, ಅರುಣಕುಮಾರ್, ಚನ್ನಬಸಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net