ಕೃಷಿ ಚಟುವಟಿಕೆಗೆಂದು ಲಕ್ಷಾಂತರ ರೂ ಸಾಲ: ಬೆಳೆ ನಷ್ಟಕ್ಕೆ ಸಿಲುಕಿ ರೈತ ಆತ್ಮಹತ್ಯೆ

crime
Published on

ಮಂಡ್ಯ: ತಾಲೂಕಿನ ಗುಡಿಗೇನಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ವಿಷಸೇವನೆ ಮಾಡಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗ್ರಾಮದ ಸೋಮಶೇಖರಯ್ಯ(58) ಮೃತ. ಈತ ಕೃಷಿ ಚಟುವಟಿಕೆಗೆಂದು ಸಹಕಾರ ಸಂಘ, ಸ್ವಸಹಾಯ ಸಂಘ, ಮೈಕ್ರೋ ಫೈನಾನ್ಸ್ ಸೇರಿದಂತೆ ಸುಮಾರು 18 ಲಕ್ಷ ರೂ ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ ಬೆಳೆ ನಷ್ಟದ ಪರಿಣಾಮ ಜ.2ರಂದು ಸಂಜೆ 6ಗಂಟೆ ಸುಮಾರಿಗೆ ಜಮೀನಿನ ಬಳಿ ವಿಷಸೇವನೆ ಮಾಡಿದ್ದಾರೆ.

ಈ ವೇಳೆ ಸಾರ್ವಜನಿಕರು ಗಮನಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ದುರಾದೃಷ್ಟವಶಾತ್ ಜ.3ರಂದು ಮೃತಪಟ್ಟಿದ್ದಾರೆ. ಈ ಸಂಬಂಧ ಮೃತನ ಪತ್ನಿ ಮಹದೇವಮ್ಮ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net