ಕೃಷಿ ಪಂಪಸೆಟ್​ಗೆ ಮೀಟರ್​ ಅಳವಡಿಸದಂತೆ ರೈತರ ಆಗ್ರಹ

4-RNR-06
Published on

ರಾಣೆಬೆನ್ನೂರ: ಕೃಷಿ ಪಂಪಸೆಟ್​ಗಳಿಗೆ ಮೀಟರ್​ ಹಾಗೂ ಆಧಾರ್​ ಲಿಂಕ್​ ಮಾಡುವ ಸರ್ಕಾರ ಕ್ರಮ ಖಂಡಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ನಗರದ ಹೆಸ್ಕಾಂ ಕಚೇರಿ ಎದುರು ಕೃಷಿ ಪಂಪಸೆಟ್​ನ ಬಿಡಿಭಾಗಗಳನ್ನಿಟ್ಟು ಪ್ರತಿಭಟನೆ ನಡೆಸಿದರು.
ರೈತ ಸಂದ ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ಮಾತನಾಡಿ, ರೈತರು ಕೃಷಿಯಿಂದ ಲಾಭವಾಗದ ಕಾರಣ ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಸರ್ಕಾರ ಕೃಷಿ ಪಂಪಸೆಟ್​ಗಳಿಗೆ ಮೀಟರ್​ ಅಳವಡಿಸಿ ಮುಂದಿನ ದಿನದಲ್ಲಿ ಹಣ ವಸೂಲಿ ಮಾಡಲು ಸಿದ್ಧತೆ ಮಾಡಿಕೊಂಡಿರುವುದು ಸರಿಯಲ್ಲ.
ಆದ್ದರಿಂದ ಸರ್ಕಾರ ಕೂಡಲೇ ಈ ಕ್ರಮ ಕೈಬಿಟ್ಟು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಬೇಕು. ಕೃಷಿ ಚಟುವಟಿಕೆಗಳಿಗೆ ನಿರಂತರ ತ್ರಿಪೇಸ್​ ವಿದ್ಯುತ್​ ಪೂರೈಸಲು ಕ್ರಮ ಕೈಗೊಳ್ಳಬೇಕು. ಹೊಸದಾಗಿ ಕೃಷಿ ಪಂಪಸೆಟ್​ಗಳಿಗೆ ಪರವಾನಗಿ ನೀಡುವಾಗ ಕಂಬ ಮತ್ತು ಇತರ ಸಲಕರಣೆಗಳಿಗೆ ಯಾವುದೇ ವಿದ್ಯುತ್​ ಶುಲ್ಕ ಭರಿಸಬಾರದು ಎಂದು ಆಗ್ರಹಿಸಿದರು. ಹೆಸ್ಕಾಂ ವಿಭಾಗೀಯ ಇಂಜಿನಿಯರ್​ ಎನ್​. ಬೆಳಕೇರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಹನುಮಂತಪ್ಪ ಕಬ್ಬಾರ, ನಾಗಪ್ಪ ರಮಾಳದ, ಹರಿಹರಗೌಡ ಪಾಟೀಲ, ಸುರೇಶ ಬಿ., ಬಸವರಾಜ ಯಲ್ಲಕ್ಕನವರ, ಹಾಲೇಶ ಕೆಂಚನಾಯ್ಕರ, ಶಿದ್ದಪ್ಪ ಯಡಚಿ, ಯಲ್ಲಪ್ಪ ಓಲೇಕಾರ, ಮಲಕಪ್ಪ ಲಿಂಗದಹಳ್ಳಿ, ಹಾಲೇಶ ತಳವಾರ, ಸುರೇಶ ಮಲ್ಲಾಪುರ, ಬಸವರಾಜ ಸಣ್ಣಹನುಮನಗೌಡ್ರ, ನಾಗನಗೌಡ ಪಾಟೀಲ, ಬಸಪ್ಪ ಹರಿಜನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net