

ರಾಣೆಬೆನ್ನೂರ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 'ತೋಟಗಾರಿಕೆ ಮೇಳ -2024ರಲ್ಲಿ 2024&-25 ನೇ ಸಾಲಿನ ಹಾವೇರಿ ಜಿಲ್ಲೆಯ ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿಯನ್ನು ತಾಲೂಕಿನ ಚಳಗೇರಿ ಗ್ರಾಮದ ಪ್ರಗತಿಪರ ರೈತ ಮುಪ್ಪಿನಾರ್ಯ ದುಳೆಹೊಳಿ ಅವರಿಗೆ ನೀಡಿ ಗೌರವಿಸಲಾಗಿದೆ.
ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪಡೆದ ಮುಪ್ಪಿನಾರ್ಯ ದುಳೆಹೊಳಿ ಅವರು ಕೃಷಿ ತೋಟಗಾರಿಕೆಯಲ್ಲಿ ತಂತ್ರಜ್ಞಾನ ಹಾಗೂ ತಾಂತ್ರಿಕತೆಗಳ ವಿಶೇಷತೆಗಳನ್ನು ಅಳವಡಿಸಿಕೊಂಡು ಉತ್ತಮ ತಳಿಯ ಟೊಮ್ಯಾಟೊ, ಹಾಗಲಕಾಯಿ, ಬದನೆಕಾಯಿ ಇತ್ಯಾದಿ ತರಕಾರಿಗಳನ್ನು ಸುಧಾರಿತ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಬೆಳೆದು, ವಗೀಕರಣ ಮಾಡಿ ಸ್ಥಳಿಯ ಹಾಗೂ ನಗರ ಮಾರುಕಟ್ಟೆಗಳಿಗೆ ನೇರವಾಗಿ ಮಾರಾಟ ಮಾಡುವ ಮೂಲಕ ಮಧ್ಯವತಿರ್ಗಳಿಂದ ಆಗುವ ನಷ್ಟವನ್ನು ತಡೆದು ಹೆಚ್ಚಿನ ಆದಾಯ ಪಡೆದ್ದಾರೆ.