

ಹಿರೇಕೆರೂರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಸರ್ವೀಸ್ ತಂತಿ ತುಳಿದು ರೈತ ಮೃತಪಟ್ಟ ಘಟನೆ ತಾಲೂಕಿನ ಕಚವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಗ್ರಾಮದ ಲೋಹಿತ್ ವೀರಯ್ಯಸ್ವಾಮಿ ದಾಸೋಹಮಠ (37) ಮೃತ ರೈತ. ಈತ ಹಿರೇಕೆರೂರ ತಾಲೂಕಿನ ಕಚವಿ ಗ್ರಾಮದಲ್ಲಿ ಜಮೀನು ಲಾವಣಿಗೆ ಪಡೆದು ಭತ್ತ ಬೆಳೆದಿದ್ದಾನೆ. ಎಂದಿನಂತೆ ಮಂಗಳವಾರ ರಾತ್ರಿ ಜಮೀನಿಗೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಕೊಳವೆಬಾವಿಗೆ ಅಳವಡಿಸಿದ್ದ ಸರ್ವಿಸ್ ವೈರ್ ಹರಿದು ನೆಲಕ್ಕೆ ಬಿದ್ದಿದ್ದನ್ನು ಆಕಸ್ಮಿಕವಾಗಿ ತುಳಿದಾಗ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.