ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

Published on

ಬೆಟ್ಟದಪುರ: ಬೆಟ್ಟದಪುರ ಸಮೀಪದ ಸಂಗರಶೆಟ್ಟಹಳ್ಳಿ ಗ್ರಾಮದ ರೈತ ರಾಮಚಂದ್ರ (73) ಸಾಲಬಾಧೆ ತಾಳಲಾರದೆ ಬುಧವಾರ ಮನೆಯ ಒಪ್ಪರಿನ

ಮೃತ ರೈತ ರಾಮಚಂದ್ರ
ಮೃತ ರೈತ ರಾಮಚಂದ್ರ

ಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗಿದ್ದ ಒಂದೂವರೆ ಎಕರೆ ಜಮೀನು ಹಾಗೂ ಗುತ್ತಿಗೆ ಮಾಡಿಕೊಂಡಿದ್ದ ಜಮೀನಿನಲ್ಲಿ ತಂಬಾಕು, ಶುಂಠಿ ಬೇಸಾಯ ಮಾಡಿದ್ದರು. ಬೇಸಾಯಕ್ಕಾಗಿ ಬೆಟ್ಟದಪುರ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 5 ಲಕ್ಷ ರೂ. ಸಾಲ ಹಾಗೂ ವಿವಿಧ ಸಂಘ-ಸಂಸ್ಥೆಯಲ್ಲಿ ಮೂರು ಲಕ್ಷ ರೂ. ಮತ್ತು ಸ್ನೇಹಿತರ ಬಳಿ ಮೂರು ಲಕ್ಷ ರೂ. ಸಾಲ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಸರಿಯಾಗಿ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಳಿಯ ರೇವಣ್ಣ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net