

ರಾಣೆಬೆನ್ನೂರ: ರೈತರು ತಾವೇ ಸ್ವತಃ ರೈತ ಸಂಪರ್ಕ ಕೇಂದ್ರಗಳಿಗೆ ಬಂದು ಬಿತ್ತನೆ ಬೀಜ ಖರೀದಿಸಬೇಕು. ಬಿತ್ತನೆ ಬೀಜ ವಿತರಣೆಗೆ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದ್ದು, ಇದರಿಂದ ರೈತರು ಕ್ಯೂಆರ್ ಕೋಡ್ ಸ್ಕಾ$ನ್ ಮಾಡಿದ ನಂತರ ಬಿಲ್ ಜನರೇಟ್ ಆಗುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹೇಳಿದರು.
ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಬಿತ್ತನೆ ಬೀಜ ಸೇರಿದಂತೆ ಕೃಷಿ ಪರಿಕರ ವಿತರಣೆಗೆ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದೆ. ಸೂಪರ್ ಮಾರ್ಕೆಟ್ ಮಾದರಿಯಲ್ಲಿ ರೈತರು ಖರೀದಿಸುವ ಪಾಕೇಟ್ ಮೇಲಿನ ಕ್ಯೂಆರ್ ಕೋಡ್ ಸ್ಕಾ$ನ್ ಮಾಡಿದ ನಂತರ ರೈತರಿಗೆ ಬಿಲ್ ಜನರೇಟ್ ಆಗುತ್ತದೆ. ಆದರೂ ಕೂಡ ರಶೀದಿ ನೀಡುವ ವ್ಯವಸ್ಥೆಯೂ ಇರುತ್ತದೆ.
ಬಿತ್ತನೆ ಬೀಜ ವಿತರಣೆ ಸಮಯದಲ್ಲಿ ಪ್ರತಿ ಪ್ಯಾಕೇಟ್ ಸ್ಕಾ$ನ್ ಮಾಡಿ ಸೀಡ್ ಎಂ.ಐ.ಎಸ್ನಲ್ಲಿ ಕ್ಯೂಆರ್ ಕೋಡ್ ಜತೆಗೆ ಇತರ ದಾಖಲಾತಿ ನಮೂದಿಸಿದ ನಂತರವೆ ಬೀಜ ವಿತರಣೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ಕಾರಣಕ್ಕೂ ಬೇರೆ ರೈತರ ಹೆಸರಿನಲ್ಲಿ ಬಿತ್ತನೆ ಬೀಜ ಮತ್ತು ಕೃಷಿ ಪರಿಕರಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಖರೀದಿಸಿದಲ್ಲಿ ಮೊಬೈಲ್ ಸಂದೇಶ ತಕ್ಷಣವೆ ರೈತರಿಗೆ ಹೋಗುತ್ತದೆ. ಆದ್ದರಿಂದ ರೈತರು ತಾವೇ ಖುದ್ದು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಪರಿಕರಗಳನ್ನು ಖರೀದಿಸಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ಕೃಷಿ ಅಧಿಕಾರಿಗಳಾದ ಅರವಿಂದ ಎಂ., ವೀರೇಶ ಜೆ.ಎಂ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.